

ಬಾಗಲಕೋಟೆ: ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಜಿಲ್ಲಾ ಸ್ವೀಪ್ ವತಿಯಿಂದ ಹಮ್ಮಿಕೊಂಡ ಸಂಚಾರಿ ಅಣಕು ಮತಗಟ್ಟೆ ಅಭಿಯಾನಕ್ಕೆ ಜಿಲ್ಲಾಽಕಾರಿ ಪಿ.ಸುನೀಲ್‌ಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್ ಬುಧವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಸ್ವೀಪ್ ವತಿಯಿಂದ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಿದ ಸಂಚಾರಿ ಅಣಕು ಮತಗಟ್ಟೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಪವಿತ್ರವಾದ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಭದ್ರತೆಗೆ ಎಲ್ಲ ಯುವ ಜನಾಂಗವು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿದ್ದು, ಮತದಾರರು ನಿರಾಶೆಯಾಗಬಾರದು. ಉತ್ತಮ ನಾಗರಿಕನಾಗುವ ಜೊತೆಗೆ ಉತ್ತಮ ಮತದಾರರಾಗಬೇಕು ಎಂದರು.
ಸ್ವೀಪ್ ಎಕ್ಸಪ್ರೇಸ್ ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಮತದಾನದ ಮಹತ್ವವನ್ನು ಸಾರುವದರ ಜೊತೆಗೆ ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಗೆ ಮತಗಟ್ಟೆಯ ಅನುಭವನನ್ನು ಉಣಬಡಿಸಲು ಬಸ್‌ನಲ್ಲೆ ಅಣಕು ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಅಲ್ಲದೇ ಕಡಿಮೆ ಮತದಾನವಾಗುವ ಪ್ರದೇಶಗಳಿಗೆ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಅಂತರಾಷ್ಟ್ರೀಯ ವಿಶೇಷ ಚೇತನ, ಕ್ರೀಡಾಪಟು ಸಿದ್ದರೂಢ ಕೊಪ್ಪದ ಮತ್ತು ಜಾನಪದ ವಿದ್ವಾಂಸ ಡಾ.ಶಂಬು ಬಳೆಗಾರ ಅವರನ್ನು ಜಿಲ್ಲೆಯ ಸ್ವೀಪ್ ರಾಯಬಾರಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಜಿಲ್ಲಾ ಸ್ವೀಲ್ ನೋಡಲ್ ಅಽಕಾರಿ ಟಿ.ಭೂಬಾಲ್ ಮಾತನಾಡಿ, ಮತದಾನ ಜಾಗೃತಿಗಾಗಿ ವಿನೂತನ ಪ್ರಯೋಗ ಅನುಸರಿಸುತ್ತಿದ್ದು, ಬಾಗಲಕೋಟೆ ಘಟಕದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಸಂಚಾರಿ ಅಣಕು ಮತಗಟ್ಟೆಯ ವಾಹನವನ್ನು ಸಿದ್ದಪಡಿಸಲಾಗಿದೆ. ಮತದಾನದ ಮಹತ್ವದ ಜೊತೆಗೆ ಮತದಾನದ ಅಣಕು ಪ್ರದರ್ಶನ ಸಹ ಬಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಾಗೃತಿ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಜಯಪ್ರಕಾಶ ಹಕ್ಕರಕಿ, ಯುಕೆಪಿಯ ಮಹಾವ್ಯವಸ್ಥಾಪಕ ಭಂವರ್ ಸಿಂಗ್ ಮೀನಾ, ಪ್ರೊಬೇಷನರಿ ಐ.ಎ.ಎಸ್ ಅಽಕಾರಿ ಕನಿಷ್ಕ, ಜಿ.ಪಂ ಯೋಜನಾಽಕಾರಿ ಸಿ.ಆರ್.ಮುಂಡರಗಿ, ವಾ.ಕ.ರ.ಸಾ.ಸಂಸ್ಥೆಯ ಜಿಲ್ಲಾ ಸಂಚಾರಿ ಅಽಕಾರಿ ಪಿ.ವಿ.ಮೈತ್ರಿ, ಜಿಲ್ಲಾ ಸ್ವೀಪ್ ರಾಯಬಾರಿ ಸಿದ್ದಾರೂಢ ಕೊಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.