ಉತ್ತಮ ದೇಶ ನಿರ್ಮಾಣ ಸಾಧ್ಯ

Bharati BGK 9
ಬಾಗಲಕೋಟೆ ನವನಗರ ಜಿವ್ಹೇಶ್ವರ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಉದ್ಘಾಟನೆ ಸಮಾರಂಭದಲ್ಲಿ ಶ್ರೀನಿವಾಸ ಜೀ, ಚಂದ್ರಶೇಖರ ದೊಡಮನಿ, ಎಂ.ಸಿ.ಹಿರೇಮಠ, ವಿನೋದ ಅಂಬೇಕರ ಇತರರಿದ್ದರು.
Published on

ಬಾಗಲಕೋಟೆ: ಇಂದಿನ ಪೀಳಿಗೆಯಲ್ಲಿ ಸನಾತನ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಂಸ್ಕಾರವAತ ಪ್ರಜೆಗಳನ್ನು ಸಮಾಜಕ್ಕೆ ನೀಡುವುದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಂಸ್ಕಾರ ಭಾರತಿ ಸಮಿತಿಯ ಮುಖ್ಯ ಉದ್ದೇಶ ಎಂದು ಸಂಸ್ಕಾರ ಭಾರತಿ ಉತ್ತರ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಜೀ ಹೇಳಿದರು.

ಇಲ್ಲಿನ ನವನಗರ ೩೪ನೇ ಸೆಕ್ಟರ್ ಜಿವ್ಹೇಶ್ವರ ಮಂದಿರದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣದೊಂದಿಗೆ ಮಕ್ಕಳು ಉತ್ತಮ ಸಂಸ್ಕಾರಗಳನ್ನು ಕಲಿತಾಗಲೇ ಸಮೃದ್ಧ ರಾಷ್ಟç ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕಾರ್ಯವನ್ನು ಮಾಡುತ್ತಿದೆ ಎಂದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಚಂದ್ರಶೇಖರ ದೊಡಮನಿ ಮಾತನಾಡಿ, ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ. ಸಂಘವು ಸ್ಥಾಪನೆಯಾದ ದಿನದಿಂದ ಸಂಸ್ಕಾರ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಈ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಸಲಹೆ ನೀಡಿದರು.

ನ್ಯಾಯವಾದಿ ಎಂ.ಸಿ.ಹಿರೇಮಠ ಮಾತನಾಡಿದರು. ಇದಕ್ಕೂ ಮುನ್ನ ನಟರಾಜ ಪ್ರತಿಮೆಗೆ ಪುಷ್ಪ ಅರ್ಪಿಸಿ ಧ್ಯೇಯ ಗೀತೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೃಷ್ಣಾ ವಾರದ ವೇಣು ವಾದನದ ಮೂಲಕ ಗಮನ ಸೆಳೆದರು. ಸಾತ್ವಿಕಾ ಗೋಗಿ ಭರತನಾಟ್ಯ ಪ್ರದರ್ಶಿಸಿದರು. ಪದ್ಮಾವತಿ ಅಣ್ಣಿಗೇರಿ ಪ್ರಾರ್ಥಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊAಡಿತು.

ಸಮಿತಿ ಉಪಾಧ್ಯಕ್ಷ ವಿನೋದ ಅಂಬೇಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಿರೇಮಠ, ಕೇಶವ ರಘುವೀರ, ಜಯತೀರ್ಥ ತಾಸಗಾಂವ, ಕಲ್ಯಾಣಕುಮಾರ್ ಗೋಗಿ, ಸಂತೋಷ ಹಿರೇಮಠ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net