

ಬಾಗಲಕೋಟೆ: ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಆಧುನಿಕ ಸೌಲಭ್ಯಗಳನ್ನು ಒದಗಿಸಿದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕುಲವಾಗಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿಯ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯವನ್ನು ಹಳೆ ಸಿಬಿಎಸ್ಸಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸರಸ್ವತಿ ಹಾಗೂ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಞಣ ಸಂಸ್ಥೆಯಾದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ೧೯೦೬ ರಲ್ಲಿ ಕೇವಲ ೧ ಸಂಸ್ಕೃತ ಪಾಠಶಾಲೆಯಿಂದ ಪ್ರಾರಂಭವಾಗಿ ಇಂದು ೧೬೮ ಅಂಗಸಂಸ್ಥೆಗಳನ್ನು ಹೊಂದಿದೆ. ಈ ಅಂಗ ಸಂಸ್ಥೆಗಳಲ್ಲಿ ನಮ್ಮ ಮಹಾವಿದ್ಯಾಲಯವು ಒಂದಾಗಿದೆ. ೨೦೧೨ ರಲ್ಲಿ ಮುಳುಗಡೆಯಿಂದ ಬಾಽತರಾದ ಸಂತ್ರಸ್ತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ವಿದ್ಯಾಗಿರಿಯಲ್ಲಿ ಈ ಪದವಿ ಮಹಾವಿದ್ಯಾಲಯವನ್ನು ಆರಂಭಿಸಲಾಯಿತು ಎಂದರು.
ಆರಂಭದಲ್ಲಿ ಕೇವಲ ಕಲಾ,ವಾಣಿಜ್ಯ ವಿಭಾಗಗಳಿಂದ ೫೬ ವಿದ್ಯಾರ್ಥಿಗಳಿದ್ದರು. ನಂತರ ವರ್ಷದಲ್ಲಿ ವಿಜ್ಞಾನ ವಿಭಾಗದಿಂದ ಅಂದಾಜು ೧೭ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು. ಪ್ರಸ್ತುತ ೨೦೨೪-೨೫ ನೇ ಸಾಲಿಗೆ ೧೨೫೦ ಕ್ಕೂ ಅಽಕ ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಈ ಮಹಾವಿದ್ಯಾಲಯವು ಸುವ್ಯವಸ್ಥಿತ ಹಾಗೂ ಮೂಲ ಸೌಕರ್ಯಗಳ ಭವ್ಯ ಕಟ್ಟಡ ಹೊಂದಿದೆ. ವಿಶಾಲವಾದ ಗ್ರಂಥಾಲಯ .ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಯೋಗಾಲಯಗಳು ಗಣಕಯಂತ್ರ ಹಾಗೂ ಭಾಷಾ ಪ್ರಯೋಗಾಲಯಗಳಿವೆ. ವಿವಿಧ ವಿಭಾಗಗಳಲ್ಲಿ, ವಿಷಯಗಳಲ್ಲಿ ಪರಿಣಿತಿ ಹೊಂದಿದ ಅಂದಾಜು ೪೦ ಕ್ಕೂ ಅಧಿಕ ಅಧ್ಯಾಪಕರಿದ್ದಾರೆ. ೨೦ ಕ್ಕೂ ಅಽಕ ಬೋಧಕೇತರ ಸಿಬ್ಬಂದಿಯವರಿದ್ದಾರೆ. ಕೇವಲ ೧೨ ವರ್ಷಗಳ ಅವಽಯಲ್ಲಿ ನಮ್ಮ ಮಹಾವಿದ್ಯಾಲಯವು ಮಹೋನ್ನತ ಪ್ರಗತಿ ಪಥದಲ್ಲಿ ಸಾಗಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ನವಿ ಮುಂಬಯಿನ ಇನ್ಸಟಿಟ್ಯೂಟ ಆಪ್ ಹೆಲ್ತ್ ಸೈನ್ಸ್ ನ ವಿಶ್ರಾಂತ ಸಂಶೋಧನಾ ನಿರ್ದೇಶಕಿ ಡಾ.ಸಬಿತಾ ಎಂ.ರಾಮ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜಿಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ ಸೇರಿದಂತೆ ಸಂಘದ ಸದಸ್ಯರುಗಳು ಪ್ರಾಚಾರ್ಯರು, ಸಿಬ್ಬಂದಿ ಭಾಗವಹಿಸಿದ್ದರು.