ಉಚಿತ ನರರೋಗ ತಪಾಸಣೆ ಶಿಬಿರ ಭಾನುವಾರ

hospital
ಸಾಂದರ್ಭಿಕ ಚಿತ್ರ
Published on

ಕಲಬುರಗಿ: ವಿಶ್ವಪಾರ್ಶ್ವವಾಯು ದಿನದ ನಿಮಿತ್ತ ಭಾನುವಾರ ಬೆಳಗ್ಗೆ ೧೧ರಿಂದ ಸಂಜೆ ೪ರವರೆಗೆ ನಗರದ ಆದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ನರರೋಗ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ. ನರರೋಗ ತಜ್ಞೆ ಡಾ.ಶ್ವೇತಾ ಅಲೋಕ ಪಾಟೀಲ್ ರೇವೂರ ತಪಾಸಣೆ ನಡೆಸಲಿದ್ದಾರೆ. ಉಚಿತ ತಪಾಸಣೆ, ನರದ ಪರೀಕ್ಷೆ, ನರರೋಗ ಪತ್ತೆ, ಮೂಳೆ ಸಾಂಧ್ರತೆ ತಪಾಸಣೆ ಮಾಡಲಾಗುವುದು. ಜಿಲ್ಲೆಯ ಜನರು ಸದುಪಯೋಗ ಪಡೆದುಕೊಳ್ಳಬೇಕು. ಮಾಹಿತಿಗೆ ೯೮೪೪೮೮೮೪೫೬ಗೆ ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net