ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

bkt-20-6
Published on

ಬಾಗಲಕೋಟೆ: ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸರಂಕ್ಷಿಸಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಎಂದು ಬನಶಂಕರಿ ಆಸ್ಪತ್ರೆಯ ಡಾ. ಗಿರೀಶ ಮಾಸೂರಕರ ಹೇಳಿದರು.

ನಗರದ ಬನಶಂಕರಿ ಆಸ್ಪತ್ರೆಯಲ್ಲಿ ಡಾ. ವ್ಹಿ. ಆರ್. ಕುಲಕರ್ಣಿ ಪ್ರತಿಷ್ಠಾನ ಅಡಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಇಂತಹ ಉಚಿತ ತಪಾಸಣೆಗೆ ಕರೆ ತರುವ ಮೂಲಕ ಹಿರಿಯರ ಸೇವೆಗೆ ನಾವು ಸದಾ ಬದ್ಧರಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಗಿರೀಶ ಮಾಸೂರುಕರ್, ಡಾ. ವೆಂಕಟೇಶ್ ದೇಶಪಾಂಡೆ, ಬೆಳಗಾಂ ರೋಟರಿ ಕ್ಲಬ್ ಅಧ್ಯಕ್ಷರಾದ ಪರಾಂಡೆ, ಜಗದೀಶ್ ಪಾಟೀಲ್ ವಿಜಯಕುಮಾರ್ ಹೊಸೂರ, ಡಾ. ಶ್ರವಣಕುಮಾರ್ ಹಾಗೂ ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು 125ಕ್ಕೂ ಮಿಗಿಲಾಗಿ ಕಣ್ಣಿನ ಪರೀಕ್ಷೆ ನಡೆಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net