ಉಗ್ರರ ಕೃತ್ಯವನ್ನು ಧರ್ಮಕ್ಕೆ ಹಚ್ಚುವ ಹುಚ್ಚುತನ ಬೇಡ

bkt-26-1
Published on

ಬಾಗಲಕೋಟೆ: ಪಹಲ್ಗಾಮ್ ನಲ್ಲಿ ಉಗ್ರರು ಹಿಂದುಗಳನ್ನು ಹುಡುಕಿ ಹುಡುಕಿ ಗುಂಡು ಹೊಡೆದರು ಎನ್ನುವ ಬಗ್ಗೆ ಸಮಗ್ರ ಮಾಹಿತಿ ನಮಗೆ ಇಲ್ಲ. ಒಂದು ವೇಳೆ ಭಯೋತ್ಪಾದಕರು ಜಾತಿ, ಧರ್ಮ ಕೇಳಿ ಮಾಡಿದ್ದರೆ, ಅದು ಯಾವುದೋ ಒಬ್ಬ ಟೆರರಿಸ್ಟ್ ಮಾಡಿದ್ದರೆ ಅದನ್ನು ಧರ್ಮಕ್ಕೆ ಹಚ್ಚಿ ರಾಜಕೀಯವಾಗಿ ಪಡೆದುಕೊಳ್ಳುವ ಹುಚ್ಚುತನ ಇರಬಾರದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಬಾಗಲಕೋಟೆ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪಹಲ್ಗಾಮ್ ಘಟನೆ ಬಗ್ಗೆ ತೂರಿಬಂದ ಪ್ರಶ್ನೆಗೆ ಉತ್ತರಿಸಿದ ಸಚಿವ ತಿಮ್ಮಾಪುರ, ಇಂಥ ಸಂದರ್ಭದಲ್ಲಿ ನಾವು ರಾಜಕಾರಣ ಮಾಡದೇ ದೇಶಕ್ಕೆ ಬಂದ ಗಂಡಾAತರವನ್ನು ಎದುರಿಸಬೇಕಿದೆ. ಘಟನೆಯನ್ನು ಧರ್ಮಕ್ಕೆ ತೆಗೆದುಕೊಂಡು ಹೋಗಿ ಅದರ ಲಾಭ ಪಡೆದುಕೊಳ್ಳುವುದು ಆಗಬಾರದು. ರಾಷ್ಟçದ ಜನರು ಘಟನೆಯಿಂದ ದುಃಖಿತರಾಗಿದ್ದೇವೆ. ಆ ನೋವನ್ನು ವ್ಯಕ್ತಪಡಿಸುವುದನ್ನು ಬಿಟ್ಟು ಹಿಂದು ಧರ್ಮದವರನ್ನು ಹುಡುಕಿ ಹುಡುಕಿ ಗುಂಡು ಹೊಡೆದು ಕೊಂದರು ಎಂದರೆ ಇದಕ್ಕೆ ನ್ಯಾಯ ಅಂತಿರಾ ಎಂದು ಪ್ರಶ್ನಿಸಿದರು.

ಪಹಲ್ಗಾಮ್ ಘಟನೆಯಲ್ಲಿ ಬೇಹುಗಾರಿಕೆ ವಿ-Àಲವಾಗಿದೆ. ಬಿಜೆಪಿ ಸರ್ಕಾರದಲ್ಲಿ ಇದು ಮೊದಲಸಲವೇನು ಅಲ್ಲ. ಹಿಂದೆ ಕಾರ್ಗಿಲ್ ಯುದ್ಧ, ಪುಲ್ವಾಮಾ, ಈಗ ಇದು ಎಲ್ಲರದಲ್ಲೂ ಬೇಹುಗಾರಿಕೆ ವಿ-Àಲವಾಗಿದೆ. ಇದನ್ನು ಕೇಳಿದರೆ ಉಗ್ರರು ಹಿಂದು, ಐಡಿ ಕಾರ್ಡ್ ನೋಡಿದರು, ಗುಂಡು ಹೊಡೆದರು ಎನ್ನುತ್ತಾರೆ. ಉಗ್ರರು ಮುಸ್ಲಿಂರನ್ನು ಕೊಂದಿಲ್ವಾ? ಯಾರೇ ಸತ್ತರೂ ಅದನ್ನು ರಾಜಕೀಯವಾಗಿ ಲಾಭ ತೆಗೆದುಕೊಳ್ಳಬೇಕು ಎನ್ನುವುದೇ ನಿಮ್ಮ(ಬಿಜೆಪಿ) ಧ್ಯೇಯ ಆದರೆ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ?

ಚುನಾವಣೆ ಬಂದಾಗ ಕಾರ್ಗಿಲ್‌ನಲ್ಲಿ ಯಾರೇ ಸತ್ತರೂ ಮುಸ್ಲಿಂರೇ ಸಾಯಿಸಿದರು ಎನ್ನುತ್ತಾರೆ. ಆ ಬಳಿಕ ಅದು ಅಸಹಜ ಸಾವು ಎಂದು ಬಂದಿತು. ಇವರು(ಬಿಜೆಪಿ) ಹಿಂದುಗಳನ್ನು ಕೂಡಿಸಿಕೊಂಡು ಓಟ್ ಹಾಕಿಸಿಕೊಂಡು ಚುನಾವಣೆ ಮಾಡಿದರು ಎಲ್ಲವನ್ನು ಚುನಾವಣೆ ದೃಷ್ಟಿಯಿಂದ ನೋಡುವುದು ಸರಿನಾ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net