ಈಶ್ವರಪ್ಪನವರಿಗೆ ಯಾವ ನೈತಿಕತೆ ಇದೆ?

bkt-19-4
ರಮೇಶ ಬದ್ನೂರ
Published on

ಬಾಗಲಕೋಟೆ: ಬಿಜೆಪಿ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಲು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಂದಾಗಿದ್ದಾರೆ. ದೇವರಾಜ ಅರಸು, ಸಂಗ್ಗೂಳ್ಳಿ ರಾಯಣ್ಣ ಹೆಸರು ಬಳಕೆ ಮಾಡುತ್ತಿದ್ದಾರೆ. ಈಶ್ವರಪ್ಪನವರಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ರಮೇಶ ಬದ್ನೂರ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಹಿಂದೆ ರಾಯಣ್ಣ ಬ್ರೀಗೆಡ್ ಮಾಡಿ ಅಮಾಯಕರನ್ನು ಬಳಕೆ ಮಾಡಿಕೊಂಡರು. ಅಮಿತ್ ಷಾ ಮೂಲಕ ಮತ್ತೆ ರಾಜಕೀಯ ನೆಲೆ ಕಲ್ಪಿಸಿಕೊಂಡರು. ರಾಜಕೀಯ ಜೀವನ ಹಿನ್ನಡೆಯಾಗಿದ್ದರಿಂದ ಬುದ್ಧ, ಬಸವ, ಕನಕದಾಸರ, ಅಂಬೇಡ್ಕರ, ಜ್ಯೋತಿಬಾ ಪುಲೆ ದಂಪತಿ, ಪೇರಿಯಾರ್, ಸಂಗ್ಗೂಳ್ಳಿ ರಾಯಣ್ಣನ ಹೆಸರು ಜಪಿಸುತ್ತಿದ್ದಾರೆ. ಇವರೆಲ್ಲರ ಸಿದ್ಧಾಂತಕ್ಕೆ ವಿರುದ್ಧವಾಗಿರುವ ರಾಜಕೀಯ ಪಕ್ಷದಲ್ಲಿ ನಿಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಭಾವ ಚಿತ್ರಗಳನ್ನು ಹಾಗೂ ಹೆಸರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net