

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬ ಹಾಗೂ ಧನುರ್ಮಾಸದ ಇಪ್ಪತ್ತೆಂಟನೇಯ ದಿನದ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
ದೇಗುಲದ ಅರ್ಚಕ ವೇ.ಮೂ.ಶ್ರೀ ಅಮರಯ್ಯ ಹಿರೇಮಠ ನೇತೃತ್ವದಲ್ಲಿ ಈಶ್ವರನಿಗೆ ವಿಶೇಷವಾಗಿ ಕಬ್ಬಿನ ಜಲ್ಲೆಯಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ರುದ್ರಾಭಿಷೇಕ ಹಾಗೂ ಪೂಜೆ ನಡೆಯಿತು. ಪೂಜೆ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ಅತ್ತಿಗೋಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಪ್ಗಾೊಂಡಿದ್ದರು.