ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ : ಎರಡನೇ ಸಲ ಮೇಲ್ಮನೆಗೆ ಚಂದ್ರಶೇಖರ ಪಾಟೀಲ್ ಎಂಟ್ರಿ

FB_IMG_1717742837391
Published on

ಕಲಬುರಗಿ : ಈಶಾನ್ಯ ಕರ್ನಾಟಕ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸಲ ಜಯಭೇರಿ ಬಾರಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು ಮತ್ತೊಮ್ನೆ ಮೇಲ್ಮನೆಗೆ ಪ್ರವೇಶಿಸಿದ್ದಾರೆ. ಕೊನೆಯ ಸುತ್ತಿನ ಮತಗಳ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದರು. ವಿನ್ನಿಂಗ್‌ ಕೋಟಾ ಮತಗಳನ್ನು ಕಾಂಗ್ರೆಸ್ ‌ಹಾಗೂ ಬಿಜೆಪಿ ಅಭ್ಯರ್ಥಿಗಳು ಪಡೆಯದೆ ಇರುವುದರಿಂದ ಎರಡನೇ ಪ್ರಾಶಸ್ತ್ಯ ಮತಗಳ‌ಎಣಿಕೆ ಮಾಡಲಾಯಿತು. ಅದರಲ್ಲೂ ಹುಮನಾಬಾದ ಅವರು ಹೆಚ್ಚಿನ ಮತಗಳನ್ನು ಪಡೆದುಕೊಂಡರು.

ಮತಗಳ ಎಣಿಕೆ ಕಾರ್ಯ ಮುಗಿದ್ದು ಫಲಿತಾಂಶ ಅಧಿಕೃತವಾಗಿ ಘೋಷಣೆ ಬಾಕಿ ಉಳಿದಿದೆ.‌

ಕೊನೆಯ ಎಂಟನೇ ಸುತ್ತಿನಲ್ಲಿ 39,496 ಮತಗಳು ಪಡೆದಿದ್ದು, 4,446 ಮತಗಳಿಂದ ಮುನ್ನಡೆ #ಪ್ರತಿಸ್ಪರ್ಧಿ ಬಿ.ಜೆ.ಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050 & ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 17,421 ಮತ ಪಡೆದಿದ್ದರು.

ರೆ. 12,513 ಮತಗಳು ತಿರಸ್ಕೃತ #ಒಟ್ಟಾರೆ ಮತ‌ ಚಲಾವಣೆಯ ಎಲ್ಲಾ 1,09,031 ಮತಗಳ ಎಣಿಕೆ ಮುಕ್ತಾಯವಾಗಿದೆ.

ವಿನ್ನಿಂಗ್ ಕೋಟಾ 48,260 ಫಿಕ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net