

ಕಲಬುರಗಿ: ರಾಜ್ಯದ ಈಡಿಗ ಬಿಲ್ಲವ ಸೇರಿ ೨೬ ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈಡಿಗ- ಬಿಲ್ಲವ ನಾಯಕರ ಸಭೆಯಲ್ಲಿ ಮಾತನಾಡಿ, ನಿಗಮಕ್ಕೆ ಅನುದಾನ ಹಾಗೂ ನಿರ್ದೇಶಕರನ್ನು ನೇಮಕ ಮಾಡುವಂತೆ ಮನವಿ ಮಾಡಲಾಗುವುದು. ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ಗುತ್ತೇದಾರ್, ಎಚ್.ಆರ್.ಶ್ರೀನಾಥ, ಜಗದೇವ ಗುತ್ತೇದಾರ್, ಪದ್ಮರಾಜ ಆರ್. ಅವರ ಸಲಹೆ, ಮಾರ್ಗದರ್ಶನದೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಅಧ್ಯP್ಷÀ ವೆಂಕಟೇಶ ಕಡೇಚೂರ್, ಪ್ರಮುಖರಾದ ತಿಮ್ಮಪ್ಪ ಗಂಗಾವತಿ, ಸುರೇಶ ಗುತ್ತೇದಾರ್, ಸಾಯಿ ಗುತ್ತೇದಾರ್, ಡಾ.ಸದಾನಂದ ಪೆರ್ಲ, ಹರ್ಷ ಗಂಗಾವತಿ, ರಾಜೇಶ ಗುತ್ತೇದಾರ್, ಪ್ರವೀಣ ಜತ್ತನ್, ಸಂತೋಷ ಚೌಧರಿ, ಅಭಿಷೇಕ್ ಗುತ್ತೇದಾರ್, ಅಶೋಕ ಸಂಕಲಾಪುರ, ನಿಂಗಯ್ಯ ಈಳಿಗೇರ್, ಅಂಜನಪ್ಪ ಗಂಗಾವತಿ ಇತರರಿದ್ದರು.