ಇಲ್ಲಿ ಎಷ್ಟೆ ತಿಪ್ಪರಲಾಗ ಹೊಡೆದರೂ ಏನೂ ಆಗಲ್ಲ

download
ಮಾಜಿ ಸಚಿವ ಎಸ್.ಆರ್.ಪಾಟೀಲ
Published on

ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಭಿನ್ನಸ್ವರಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ, ಮುಖ್ಯಮಂತ್ರಿ ಬದಲಾವಣೆ ನಮ್ಮ ಪಕ್ಷದ ವರಿಷ್ಠರು ನಿರ್ಣಯ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಇಲ್ಲಿ ನಾವು ಎಷ್ಟೆ ತಿಪ್ಪರಲಾಗ ಹೊಡೆದರೂ ಏನೂ ಆಗಲ್ಲ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಒಮ್ಮತದಿಂದ ನಾಯಕನ ಆಯ್ಕೆ ಆಗುತ್ತದೆ. ಅದಕ್ಕೆ ವರಿಷ್ಠರು ಒಪ್ಪಿಗೆ ಕೊಡುತ್ತಾರೆ. ಆಗ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ಬಿಟ್ಟು ನಾನು ನಮ್ಮೊಳಗೆ ಕಚ್ಚಾಡುತ್ತ ನಿಂತರೆ ಅಂತಿಮವಾಗಿ ಯಾವುದೇ -Àಲಿತಾಂಶ ಕೊಡುವುದಿಲ್ಲ ಎಂದರು.

ನಾನು ಪಕ್ಷದ ಹೈಕಮಾಂಡ್ ಅಲ್ಲ, ಲೋಕಮಾಂಡ್ ಅಲ್ಲ. ಅಂತಿಮವಾಗಿ ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ರಾಜಕಾರಣ ಬದಲಾಗುತ್ತದೆ. ಇದೆಲ್ಲ ಹೈಕಮಾಂಡ್‌ನಿAದ ನಿರ್ಧಾರ ಆಗುತ್ತದೆ. ವರಿಷ್ಠರು ತೀರ್ಮಾನ ಮಾಡಿದರೆ ಯಾರಾದರೂ ಸಿಎಂ ಆಗಬಹುದು. ಇದಕ್ಕೆ ಶಾಸಕಾಂಗ ಪಕ್ಷದಲ್ಲಿ ಸಹಮತ ಇರಬೇಕು. ನಾಯಕನ ಆಯ್ಕೆಗೆ ವರಿಷ್ಠರ ಕೊನೆಮುದ್ರೆ ಇರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಕೆಶಿ ಸಿಎಂ ಆಗುತ್ತಾರೆ ಎಂದು ಜೈನ್ ಮುನಿಗಳು ಭವಿಷ್ಯ ನುಡಿದ ಬಗ್ಗೆ ಪ್ರಶ್ನಿಸಿದಾಗ, ನನಗೆ ವೈಯಕ್ತಿಕವಾಗಿ ಭವಿಷ್ಯದಲ್ಲಿ ನಂಬಿಕೆ ಕಡಿಮೆ. ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ಅವಲಂಬಿತರಾಗಬೇಕು. ನನಗೆ ಭವಿಷ್ಯ ಹೇಳಿದ್ದಾರೆಂದು ನಾನು ಮುಖ್ಯಮಂತ್ರಿ ಆಗುತ್ತೇನೆ ಎನ್ನುವಾಗ ಅದಕ್ಕೆ ನಾನು ಎಷ್ಟರ ಮಟ್ಟಿಗೆ ಅರ್ಹನಾಗಿದ್ದೇನೆಂದು ಯೋಜನೆ ಮಾಡಬೇಕು. ಆ ಮಟ್ಟಕ್ಕೆ ಹೋಗಲು ನನಗೆ ಸಾಮರ್ಥ್ಯೆ ಇದೆಯೋ ಇಲ್ಲವೋ ಎಂದು ನಾನು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ. ಹೀಗಾಗಿ ನಾನು ಭವಿಷ್ಯ ಹೇಳುವವರ ಬಗ್ಗೆ ಏನು ಹೇಳುವುದಿಲ್ಲ. ಭವಿಷ್ಯದ ಮೇಲೆ ಅವಲಂಬಿತರಾಗದೇ ನಮ್ಮ ಶ್ರಮ, ಪರಿಶ್ರಮದಲ್ಲಿ ಕೃಷಿ ಮಾಡಿದರೆ ಅದಕ್ಕೆ -Àಲಿತಾಂಶ ಸಿಗುತ್ತದೆ ಎಂದು ಹೇಳಿದರು.

ರಾಜ್ಯ ರಾಜಕೀಯದಲ್ಲಿ ಗುಂಪುಗಾರಿಕೆ ಬೆಳವಣಿಗೆ ವಿಚಾರವಾಗಿ, ಯಾವುದೇ ರಾಜಕೀಯ ಪಕ್ಷದಲ್ಲಿ ಸಹಮತ ಹಾಗೂ ಪರಸ್ಪರ ಭ್ರಾತೃತ್ವ ಭಾವನೆಯಿಂದ ಪಕ್ಷವನ್ನು ಮುನ್ನೆಡೆಸಬೇಕು. ಇಲ್ಲವಾದರೆ ಆಡಳಿತದ ಮೇಲೆ ಅದು ಪರಿಣಾಮ ಬೀರುತ್ತದೆ. ಪಕ್ಷದ ಸಿದ್ಧಾಂತ ಹಾಗೂ ಜನ ಕಲ್ಯಾಣಕ್ಕೆ ಆದ್ಯತೆ ಕೊಟ್ಟು ನಮ್ಮ ವಿಚಾರಗಳನ್ನು ಹೇಳಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅದು ವ್ಯಕ್ತಿಗತ ಭಿನ್ನಾಭಿಪ್ರಾಯ ನಿಜಕ್ಕೂ ಮಾರಕ. ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸಹಜ. ನಮ್ಮ ಸ್ವಾರ್ಥ, ಕುರ್ಚಿ ಹಿಡಿಯುವ ಸಲುವಾಗಿಯೇ ಭಿನ್ನಾಭಿಪ್ರಾಯಗಳು ಇದ್ದರೆ ಅದರಿಂದ ಪಕ್ಷಕ್ಕೂ ಒಳ್ಳೆಯದಲ್ಲ, ರಾಜ್ಯದ ಜನತೆಗೂ ಒಳ್ಳೆಯದಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net