ಇಬ್ಬರು ಯುವತಿಯರು ಸೇರಿ ಆರು ಜನರ ಬಂಧನ

10HLY-2(B)
Published on

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವನಶ್ರೀ ಲಾಜ್ ಮೇಲೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಮಂಗಳವಾರ ಸಂಜೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಬಂದಿದ್ದ ನಾಲ್ವರು ಯುವತಿಯರು ಹಾಗೂ ದಂಧೆ ನಡೆಸುತ್ತಿದ್ದ ನಾಲ್ವರನ್ನು ಹಿಡಿದಿದ್ದಾರೆ.

ಮಂಗಳೂರಿನ ಪವನ ಆಚಾರಿ, ಹಾವೇರಿಯ ಬಸವರಾಜ ಗುತ್ತೇಣ್ಣನವರ, ಬದಾಮಿಯ ನಾಗರಾಜ ಬಸವಂತಪ್ಪ ಸಂಕದಾಳ, ಕಿತ್ತೂರಿನ ಅಡಿವೆಪ್ಪ ನರಗುಂದ ಬಂಧಿತರು. ವೇಶ್ಯಾವಾಟಿಕೆಗೆ ಕರೆತಂದಿದ್ದ ಹೆಣ್ಣು ಮಕ್ಕಳನ್ನು ಕಿರಿದಾದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಕರ್ನಾಟಕ ಇಂಟಿಗ್ರೇಟೆಡ್ ಡೆವಲಂಪಮೆಂಟ್ ಸರ್ವಿಸ್ ಧಾರವಾಡ ಸಂಸ್ಥೆಯವರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದರು. ಲಾಜ್​ನಲ್ಲಿ ಆರೋಗ್ಯ ಇಲಾಖೆಯ 10 ಕ್ಕೂ ಹೆಚ್ಚು ನಿರೋಧ್ ಪೆಟ್ಟಿಗೆಗಳು ಪತ್ತೆಯಾಗಿದ್ದು, ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ದಾಳಿಯ ಮುಂದಾಳತ್ವ ವಹಿಸಿದ್ದ ಕೆ.ವಿ. ಸ್ಟೇನ್ಲಿ ತಿಳಿಸಿದ್ದಾರೆ. ಪ್ರದೀಪ, ಪೃಥ್ವಿ, ದೀಕ್ಷಿತ್, ಪರಶುರಾಮ ಎಂ.ಎಲ್., ಶಂಕರಪ್ಪ ಡಿ., ಅಶೋಕ ಯರಗಟ್ಟಿ, ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ ದಾಳಿಯಲ್ಲಿ ಪಾಲ್ಗೊಂಡಿದ್ದರು. ಲಾಜ್ ಅನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪಟ್ಟಣದ ಎಲ್ಲ ಲಾಜ್​ಗಳ ಮೇಲೆ ನಿಗಾವಹಿಸಲಾಗುವುದು ಎಂದು ಸಿಪಿಐ ಬಿ.ಎಸ್. ಲೋಕಾಪುರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net