ಇಂದಿರಾಗಾಂಧಿಯಿಂದ ಸಂವಿಧಾನ ಸಮಾಧಿ ಕೆಲಸ

images
Published on

ಬಾಗಲಕೋಟೆ: ತುರ್ತು ಪರಿಸ್ಥಿತಿ ಎನ್ನುವುದು ಭಾರತದ ದೃಷ್ಟಿಯಲ್ಲಿ ಕರಾಳ ದಿನವಾಗಿದೆ. ಡಾ.ಅಂಬೇಡ್ಕರ್ ಅವರು ನಮಗೆಲ್ಲ ಕೊಟ್ಟ ಸಂವಿಧಾನವನ್ನು ಗಾಳಿಗೆ ತೂರಿ ಎಮರ್ಜೆನ್ಸಿ ಜಾರಿಗೆ ತರಲಾಯಿತು. ಆ ಮೂಲಕ ಇಂದಿರಾ ಗಾಂಽ ಅವರು ಸಂವಿಧಾನವನ್ನು ಸಮಾಧಿ ಮಾಡಿದರು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ತಂದ ಬಳಿಕ ಸಂವಿಧಾನವನ್ನು ಹಳಿಯುವಂತಹ ಕೆಲಸ ಆಯಿತು. ಸಂವಿಧಾನಕ್ಕೆ ತಂದ ೪೨ನೇ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದೇ ಕರೆಯಲಾಗುತ್ತದೆ. ಡಾ.ಅಂಬೇಡ್ಕರ್ ಅವರಿಗೆ ಆಪ್ತವಾದಂತಹ ಮೂಲಭೂತ ಹಕ್ಕುಗಳನ್ನು ಕಸಿಯುವ, ಸಮಾಜದ ಜನರ ಮೂಲಭೂತ ಹಕ್ಕುಗಳನ್ನು ರಾಷ್ಟ್ರ

ಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಇಂತಹ ಎಲ್ಲ ಪ್ರಯತ್ನ ಮಾಡಿದಂತಹ ಇಂದಿರಾಗಾಂಧಿ ಅವರ ಕೆಲಸವನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸ ವಿಳಂಬವಾಗಿದ್ದರೂ ಅದನ್ನು ಮಾಡಬೇಕಾಗಿದೆ ಎಂದರು.

ರಾಜ್ಯದಲ್ಲಿ ಹಿಂದು ಮುಖಂಡರ ಮೇಲೆ ಕಾಂಗ್ರೆಸ್ ನಿರ್ಬಂಧ ಹಾಕುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೂಲಿಬೆಲೆ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಪರಿವಾರದ ಜೀನ್ಸ್ ಇವತ್ತಿನವರೆಗೂ ಹರಿಯುತ್ತಿದೆ. ಇಂದಿರಾ ಗಾಂಧಿ ಮಾತ್ರವಲ್ಲ ಸರ್ವಾಽಕಾರತ್ವ ಪ್ರದರ್ಶಿಸಿಲ್ಲ. ಡಾ.ಅಂಬೇಡ್ಕರ್ ಬದುಕಿದ್ದಾಗಲೇ ನೆಹರು ಅವರು ಸಂವಿಧಾನ ತಿದ್ದುಪಡಿ ತಂದಿದ್ದರು. ಆವತ್ತಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸಮಾಜದ ಮೂಲಭೂತ ಹಕ್ಕುಗಳನ್ನು ಮೊಟಕು ಮಾಡಲು ನಿಂತಿದೆ.

ಹೀಗಾಗಿಯೇ ಸಿದ್ದರಾಮಯ್ಯ ಅವರು ಜಿಲ್ಲೆಯಿಂದ ಜಿಲ್ಲೆಗೆ ಹೋಗುವುದನ್ನು ತಡೆಯಲು ಈಗ ಮತ್ತೊಂದು ಕಾನೂನು ತರಲು ಪ್ರಯತ್ನ ಮಾಡುತ್ತಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾಗುವ ಭಾಷಣ ಮಾಡಿದರೆ ಮೂರು ವರ್ಷ ಜೈಲಿಗೆ ಹಾಕಬೇಕು ಎನ್ನುವ ಹೊಸ ಕಾನೂನು ತರಲು ಹೊರಟಿದ್ದಾರೆ. ಇದು ನಿಸ್ಸಂಶಯವಾಗಿ ನೆಹರು ಅವರು ಮೊದಲು ತಂದ ತಿದ್ದುಪಡಿಯಂತೆ ಈಗ ಮಾಡಲು ಹೊರಟಿದ್ದಾರೆ. ಇದೊಂದು ಹಿಟ್ಲರ್ ಮಾದರಿ ಸರ್ಕಾರ ಎಂದು ಹೇಳಿದ್ದಕ್ಕೆ ಕೇಸ್ ಹಾಕಿದರು. ಬಹುಶಃ ಇದು ದೇಶಕ್ಕೆ ಗೊತ್ತಾಗುತ್ತಿದೆ. ಇದರಿಂದ ಇದು ಹಿಟ್ಲರ್ ಮಾದರಿ ಸರ್ಕಾರ ಎಂದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮೇಲೆ ನಿಷೇಧ ಹೇರಿದ ಬಗ್ಗೆ ಪ್ರತಿಕ್ರಿಯಿಸಿದ ಚಕ್ರವರ್ತಿ, ನನ್ನ ಮೇಲೆ ಇರುವ ಎಲ್ಲ ಕೇಸ್‌ಗಳನ್ನು ಒಟ್ಟುಗೂಡಿಸಲು ಮುಂದಾಗಿತ್ತು. ಅವರ ದುರಾದೃಷ್ಟಕ್ಕೆ ಪಿಟಿ ಕೇಸ್‌ಗಳನ್ನು ಹಾಕಿದ್ದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ದೈನೇಸಿ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತ ಪದ ತೆಗೆಯುವ ಬಗ್ಗೆ ಹೇಳಿಕೆ ನೀಡಿರುವ ಹೊಸಬಾಳೆ ಅವರ ಹೇಳಿಕೆಗೆ ಸಮರ್ಥನೆ ನೀಡಿದ ಚಕ್ರವರ್ತಿ ಸೂಲಿಬೆಲೆ, ಪೀಠಿಕೆಯಲ್ಲಿ ಏನಿರಬೇಕು, ಏನಿರಬಾರದು ಎಂಬುದು ೧೯೪೭ ರಲ್ಲೆ ವಿಸ್ತÈತ ಚರ್ಚೆ ಆಗಿದೆ. ಜಾತ್ಯತೀತ, ಸಮಾಜವಾದ ಪದ ಯಾಕೆ ಇರಬಾರದು ಅನ್ನೋ ಕೆ.ಟಿ.ಶಾ ಪ್ರಶ್ನೆಗೆ ಸ್ವತಃ ಅಂಬೇಡ್ಕರ್ ಅವರೇ ಉತ್ತರ ನೀಡಿದ್ದಾರೆ. ಆದರೆ ಇವೆಲ್ಲವನ್ನು ಇಂದಿರಾ ಗಾಂಧಿ ಗಾಳಿಗೆ ತೂರಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಬೇಕು ಎಂದೇ ಎಮರ್ಜೆನ್ಸಿ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬೇಡ ಎಂದಿದ್ದ ಪದಗಳನ್ನು ಸೇರಿಸಿದರು. ಹೀಗಾಗಿ ಇದು ಬಾಬಾ ಸಾಹೇಬರ ಪ್ರಿಯಾಂಬಲ್ ಅಲ್ಲ, ಇದು ಇಂದಿರಾ ಗಾಂಧಿ ಪ್ರಿಯಾಂಬಲ್ ಎಂದು ಕಾಂಗ್ರೆಸ್ ನವರು ಹೇಳಿಕೊಂಡರೆ ಒಳ್ಳೆಯದು. ಈ ಸತ್ಯವನ್ನು ಎದುರಿಸುವ ತಾಕತ್ತು ಕಾಂಗ್ರೆಸ್‌ಗೆ ಇಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net