

ಸಂತೋಷ ದೇಶಪಾಂಡೆ
ಬಾಗಲಕೋಟೆ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಒಂದು. ನಗರ ಪ್ರದೇಶಕ್ಕೆ ಆಗಮಿಸುವ ಜನರಿಗೆ ಅನ್ನದ ಬಟ್ಟಿಲು ತುಂಬಿಸುತ್ತದೆ. ಜಿಲ್ಲೆಯ ಉಳಿದ ಭಾಗದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೇ ಇಲ್ಲೊಂದು ಕ್ಯಾಂಟೀನ್ ಉದ್ಘಾಟನಾ ಭಾಗ್ಯಕ್ಕೆ ಕಂಡಿಲ್ಲ. ಆಡಳಿತ ಯಂತ್ರದ ನಿರ್ಲಕ್ಷ್ಯ ಧೋರಣೆಗೆ ಅಧೋಗತಿಗೆ ಇಳಿದಿದೆ...!!
ಹೌದು ಬಾದಾಮಿ ವಿಧಾನಸಭಾ ಮತಕ್ಷೇತ್ರದ ಗುಳೇದಗುಡ್ಡ ಇಂದಿರಾ ಕ್ಯಾಂಟೀನ್ ಕತೆ-ವ್ಯಥೆ. ನೂತನ ತಾಲೂಕಾಗಿ ಘೋಷಣೆಯಾದ ಬಳಿಕ ಗುಳೇದಗುಡ್ಡ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿ ಕಟ್ಟಡ ಕೂಡಾ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಗೆ ಅರ್ಪಣೆಗೊಂಡಿಲ್ಲ. ಇದರಿಂದ ಕಟ್ಟಡ ಸಂಪೂರ್ಣ ಪಾಳು ಬೀಳುತ್ತಿದೆ. ಸರ್ಕಾರದ ಹಣ ಕಣ್ಣು ಮುಂದೆ ಹಾಳಾಗುತ್ತಿದ್ದರು ಜನಪ್ರತಿನಿಽಗಳು, ಅಽಕಾರಿಗಳು ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
* ಅಕ್ರಮ ಚಟುವಟಿಕೆಗಳ ತಾಣ...
ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ವರ್ಷಗಳೇ ಗತಿಸುತ್ತಾ ಬಂದಿದೆ. ಕಾಮಗಾರಿ ನಿಧಾನಗತಿ ಸಾಗಿದ ಪರಿಣಾಮ ನಿಗಽ ಸಮಯದಲ್ಲಿ ಸೇವೆ ದೊರೆಯಲಿಲ್ಲ. ನಂತರವಾದರು ಸುಧಾರಣೆ ಕಂಡಿತು ಎನ್ನುವ ಭರವಸೆ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಯಾರೊಬ್ಬರು ಕ್ಯಾರೇ ಎನ್ನದ ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಪಟ್ಟಣದ ಪ್ರಮುಖ ಸ್ಥಳವಾದ ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಕ್ಯಾಂಟೀನ್ ನಿರ್ಮಾಣವಾಗಿದ್ದರು ಸಂಜೆ ಆದರೇ ಸಾಕು ಸರಾಯಿ ಪ್ಯಾಕೇಟ್ ದರ್ಬಾರ ಕಾಣ ಸಿಗುತ್ತದೆ. ಬಿಡಾಡಿ ದನಗಳು, ಹಂದಿಗಳು ದಾಗುಂಡಿ ಇಟ್ಟುತ್ತೀವೆ. ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದು, ಗಬ್ಬೆದ್ದು ಹೋಗಿದೆ.
ಜಿಲ್ಲೆಯ ಬಾಗಲಕೋಟೆ, ಬೀಳಗಿ, ಮುಧೋಳ ಸೇರಿದಂತೆ ಹಲವಡೆ ಇರುವ ಕ್ಯಾಂಟೀನ್ ಬಡವರು, ಕಾರ್ಮಿಕರು, ರೋಗಿಗಳಿಗಳ ಪಾಲಿಗೆ ಅಕ್ಷಯ ಪಾತ್ರೆಯ ಆಗಿದೆ. ಆದರೇ ಗುಳೇದಗುಡ್ಡ ಪಟ್ಟಣಕ್ಕೆ ಆಗಮಿಸುವ ನಿತ್ಯ ನೂರಾರು ಜನರಿಗೆ ಅನುಕೂಲ ಕಲ್ಪಿಸಬೇಕಿದ್ದ ಈ ಕ್ಯಾಂಟೀನ್ ಅದೋಗತಿ ಇಳಿದಿರುವುದು ಬಹಳಷ್ಟು ನೋವು ಉಂಟು ಮಾಡಿದೆ. ಸಾರ್ವಜನಿಕರು ಶೀಘ್ರ ಉದ್ಘಾಟನೆಗೊಳ್ಳಲಿ ಅಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದಕ್ಕೆ ಆಡಳಿತ ವರ್ಗವೇ ಉತ್ತರಿಸಬೇಕು..!!