ಇಂದಿನಿಂದ ಶ್ರೀನಿವಾಸ ಕಲ್ಯಾಣೋತ್ಸವ

6KMD-1
Published on

ಕೆ.ಎಂ.ದೊಡ್ಡಿ: ಇಲ್ಲಿನ ಮಾರಿಗುಡಿ ಆವರಣದಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಪ್ರಥಮ ವಾರ್ಷಿಕ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಜೂ.7 ರಿಂದ 10ರವರೆಗೆ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ವೆಂಕಟೇಶ್ವರ ದೇವಾಲಯ ಉದ್ಘಾಟನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ವರ್ಷವು ಹರಿಸೇವೆ ಕಾರ್ಯಕ್ರಮ ನಡೆಯಲಿದೆ. ಜೂ.7ರಂದು ಗಣಪತಿ ಹೋಮ, ನವಗ್ರಹ ಹೋಮ. 8ರಂದು ಶಾಂತಿ ಹೋಮ, ಪೂರ್ವಕ ಮಹಾಭಿಷೇಕ, 9ರಂದು ಲಕ್ಷ್ಮೀವೆಂಕಟೇಶ್ವರ, ಲಕ್ಷ್ಮೀನರಸಿಂಹ, ಲಕ್ಷ್ಮೀವರಾಹ, ಲಕ್ಷ್ಮೀ ಹಯಗ್ರೀವ ಹೋಮ, ಪೂರ್ಣಾಹುತಿ, ಸಂಜೆ 4 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.


ಜೂ.10ರಂದು ಬೆಳಗ್ಗೆ 10 ಗಂಟೆಗೆ ಕಾಬ್ಬಾಳಮ್ಮ ದೇವಾಲಯದ ಬಳಿ ಹೂ ಹೊಂಬಾಳ ಮೂಲಕ ಕಾರ್ಕಹಳ್ಳಿ ಬಸವಪ್ಪ, ಸಣಕ್ಕಿರಾಯ ಸ್ವಾಮಿ ಬಸವಪ್ಪ ಹಾಗೂ ದೊಡ್ಡರಸಿನಕೆರೆ ಏಳೂರಮ್ಮ, ಕಾಳಮ್ಮ ದೇವರ ಪೂಜಾ ಮೆರವಣಿಗೆ ಜರುಗಲಿದೆ. ಈ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ವೆಂಕಟೇಶ್ವರ ಸ್ವಾಮಿಯ ಪಾದಕ್ಕೆ ಅರ್ಪಿಸುವುದು, ಮಹಾಮಂಗಳಾರತಿ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಶಿವಾರ ಉಮೇಶ್ ತಂಡದಿಂದ ಭಕ್ತಿಗಾಯನ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಜೂ.11ರಂದು ಬೆಳಗ್ಗೆ 7.30ಕ್ಕೆ ಶಯನೋತ್ಸವ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 10 ಸಾವಿರ ಭಕ್ತರಿಗೆ ಲಡ್ಡು ಹಾಗೂ ಪ್ರಸಾದ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪೂಜಾರಿ ವೆಂಕಟೇಗೌಡ ತಿಳಿಸಿದ್ದಾರೆ.

ಭಕ್ತರ ಸಹಕಾರದಿಂದ ಶ್ರೀ ವೆಂಕಟೇಶ್ವರ ದೇವಾಲಯ ನಿರ್ಮಾಣವಾಗಿದ್ದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಉತ್ಸವಕ್ಕೆ 10 ಸಾವಿರ ಭಕ್ತರು ಆಗಮಿಸುವ ಸಾಧ್ಯತೆ ಇದೆ.
ವೆಂಕಟೇಶ್, ಕಾರ್ಯಾಧ್ಯಕ್ಷ, ಶ್ರೀ ವೆಂಕಟೇಶ್ವರ ಸೇವಾ ಸಮಿತಿ, ಭಾರತೀನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net