ಇಂದಿನಿಂದ ಕಾವೇರಿ ಶಾಲೆಯಲ್ಲಿ ಕಾವೇರಿ ಕಲೋತ್ಸವ

Published on

ಶನಿವಾರಸಂತೆ: ಪಟ್ಟಣದ ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ಕಾವೇರಿ ಕಲೋತ್ಸವ ಕಾರ್ಯಕ್ರಮವನ್ನು ಜ.10, 11ರಂದು ಹಮ್ಮಿಕೊಳ್ಳಲಾಗಿದೆ.

10ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಶು ಆರೋಗ್ಯ ಪ್ರದರ್ಶನ, ರ‌್ಯಾಂಪ್ ಶೋ ಸ್ಪರ್ಧೆ, ಮಕ್ಕಳ ಸಂತೆ, ವಸ್ತುಪ್ರದರ್ಶನ, ಪಾಲಕರಿಗೆ ಕ್ರೀಡಾಕೂಟ ಸೇರಿದಂತೆ ಸಂಜೆ 5 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ.11ರಂದು ಮಧ್ಯಾಹ್ನ 2.30 ಗಂಟೆಗೆ ಕಲೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಜ್ವಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಲ್.ಕನ್ವಾರ್‌ರಾಮ್ ಅಧ್ಯಕ್ಷತೆ ವಹಿಸುವರು.

ಹುಣಸೂರಿನ ರತ್ನಪುರಿ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಮತ್ತು ಲೇಖಕ ಡಾ.ಮಹಾದೇವಸ್ವಾಮಿ ಹೆಗ್ಗೋತ್ತರ ಸಮಾರೋಪ ಭಾಷಣ ಮಾಡುವರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳಾ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ, ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಸತ್ಯವತಿ, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ಪ್ರಜ್ವಲ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಜಿ.ಎಂ.ಹೂವಯ್ಯ, ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಎನ್.ದೇವರಾಜ್ ಪಾಲ್ಗೊಳ್ಳುತ್ತಾರೆ ಎಂದು ವಿದ್ಯಾಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net