

ಕಾರವಾರ: ಕುಮಟಾ ಮೂರೂರು ಸಿದ್ದರಮಠದ ಕಲಾವಿದ ಶಿವಮೂರ್ತಿ ಭಟ್ಟ ಅವರ ಕಲಾ ಸಾಧನೆ ಇಂಡಿಯಾ ಬುಕ್ ಹೌಸ್ ದಾಖಲೆಯಲ್ಲಿ ಸೇರ್ಪಡೆ ಗೊಂಡಿದೆ.
ಹೆಸರಾಂತ ಕಲಾಕಾರ ಸೂರ್ಯನಾರಾಯಣ ಗಣೇಶ ಭಟ್ಟ ಅವರ ಪುತ್ರ ಶಿವಮೂರ್ತಿ ಕಲ್ಲು, ತೆಂಗಿನ ಗರಟೆ, ಬೇರು ಮುಂತಾದ ವಸ್ತುಗಳಿಂದ ಕಲಾಕೃತಿ ಮಾಡುವ ಹವ್ಯಾಸ ಹೊಂದಿದ್ದಾರೆ. ಒಂದಿಂಚು ಉದ್ದಗಲದಿಂದ ಹಿಡಿದು ಹತ್ತಾರು ಅಡಿ ವರೆಗಿನ ಕಲಾಕೃತಿಗಳು ಶಿವಮೂರ್ತಿ ಯಿಂದ ಸಿದ್ದಗೊಂಡಿವೆ.
ಇಲ್ಲಿಯವರೆಗೆ ಐನೂರು ಕ್ಕೂ ಹೆಚ್ಚು ಹಸ್ತ ಕಲಾಕ್ರತಿಗಳು, ದೇವರ ಮೂರ್ತಿ, ಪ್ರಾಣಿ ಪಕ್ಷಿ, ಹೂವಿನ ಕುಂಡ. ಮನೆ ಕೆಲಸದ ಸಾಮಗ್ರಿ, ಗೋಡೆಗೆ ಹಾಕುವ ಸುಂದರ ಪ್ಲೇಟ್ ಗಳು, ತೆಂಗಿನ ಕಾಯಿ ಚಿಪ್ಪು, ಮರಗಳ ಬೇರು, ಸಮುದ್ರ ಚಿಪ್ಪು ಮತ್ತು ಕಲ್ಲುಗಳಲ್ಲಿ ರಚಿಸಿರುವ ಶಿವಮೂರ್ತಿ ಅವರ ಸಾಧನೆ ಗಮನಾರ್ಹ. ಇತ್ತೀಚೆಗೆ ಶಿವಮೂರ್ತಿ ಅವರು ಇಂಡಿಯಾ ಬುಕ್ ಹೌಸ್ ಪ್ರಮಾಣಪತ್ರ ಹಾಗೂ ಪದಕವನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದ ಮೂಲಕ ಪಡೆದುಕೊಂಡಿದ್ದಾರೆ.