

ಕಲಬುರಗಿ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪರ‍್ವ ಕಾಲೇಜಿನ ಇಬ್ಬರು, ಭಾಲ್ಕಿ ತಾಲೂಕಿನ ಕರಡ್ಯಾಳ್ ಚನ್ನಬಸವೇಶ್ವರ ಗುರುಕುಲ ಪಿಯು ಕಾಲೇಜಿನ ಇಬ್ಬರು ವಿದ್ಯರ‍್ಥಿಗಳ ಮೆಡಿಕಲ್ ಅಧ್ಯಯನಕ್ಕೆ ಅಗತ್ಯವಾಗಿರುವ ಸ್ಕಾಲರ್ಶಿಪ್ ಮೊತ್ತ ಪಡೆದುಕೊಳ್ಳಲು ಪ್ರಗತಿ ಆಪಲ್ ಎಜ್ಯುಕೇಷನ್ ಆಗತ್ಯ ಸಹಕಾರ ನೀಡಿದೆ ಎಂದು ಸಂಸ್ಥೆಯ ಅಧ್ಯ ವಿಜಯಕುಮಾರ ಬಳಿಗಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಭಾಗದ ವಿದ್ಯರ‍್ಥಿಗಳಿಗೆ ಪ್ರಗತಿ ಆಪಲ್ ಎಜ್ಯುಕೇಷನ್ ಸಂಸ್ಥೆಯ ಸೇವೆ ಹೆಚ್ಚು ದೊರೆಯಬೇಕು ಎನ್ನುವ ಕಾರಣದಿಂದ ಎಸ್.ಎಸ್.ಹಿರೇಮಠ ಮುತುರ‍್ಜಿ ವಹಿಸಿ ನಮ್ಮ ಸೇವೆಯನ್ನು ಆ ಎರಡು ಕಾಲೇಜುಗಳಲ್ಲಿ ಪರಿಚಯಿಸಿದ ಕಾರಣ ಈ ಸಹಕಾರ ನೀಡಲು ಸಾಧ್ಯವಾಗಿದೆ ಎಂದರು.
ಶಿವಮೊಗ್ಗದಲ್ಲಿ ಮುಖ್ಯ ಕಚೇರಿ ಹೊಂದಿರುವ ಪ್ರಗತಿ ಆಪಲ್ ಎಜ್ಯುಕೇಷನ್ ಕಳೆದ ೧೨ ರ‍್ಷಕ್ಕೂ ಹೆಚ್ಚು ಕಾಲದಿಂದ ಪಿಯು ವಿಾನ ೇತ್ರದಲ್ಲಿ ಕರ‍್ಯನರ‍್ವಹಿಸುತ್ತಿದ್ದು, ಪಿಯು ವಿಾನ ಅಧ್ಯಯನ ಮಾಡುವ ವಿದ್ಯರ‍್ಥಿಗಳು ಬರೆಯಬಹುದಾದ ಸ್ರ‍್ಧಾತ್ಮಕ ಪರೀೆ, ಅದಕ್ಕೆ ಬೇಕಾದ ದಾಖಲೆಗಳು, ನೀಟ್, ಸಿಇಟಿ, ಜೆಇಇ ಪರೀೆಗಳ ಬಳಿಕ ಪ್ರವೇಶ, ಕೌನ್ಸೆಲಿಂಗ್ ಜತೆಗೆ ವೃತ್ತಿಪರ ಕರ‍್ಸ್ ಸೇರುವ ಪ್ರತಿಭಾವಂತರು ವಿವಿಧ ಮೂಲಗಳಿಂದ ಸ್ಕಾಲರ್ಶಿಪ್ ಪಡೆಯಲು ಅಗತ್ಯ ನೆರವು ನೀಡುತ್ತಿದೆ. ಅಂದಾಜು ೩೦ ಕೋಟಿ ರೂ.ಗೂ ಅಧಿಕ ಮೊತ್ತದ ಸ್ಕಾಲರ್ಶಿಪ್ ರಾಜ್ಯದ ವಿದ್ಯರ‍್ಥಿಗಳಿಗೆ ಲಭ್ಯವಾಗುವಂತೆ ನೆರವು ನೀಡಿದೆ ಎಂದರು.
೨೦೨೪ರಲ್ಲಿ ನೀಟ್ ಪರೀೆಯಲ್ಲಿ ಸಾಧನೆ ಮಾಡಿದ ಎಸ್ಬಿಆರ್ ಕಾಲೇಜಿನ ವಿದ್ಯರ‍್ಥಿ ಪಂಚಾರಿಗೆ ಡಾ.ಸ.ಜ.ನಾಗಲೋತಿಮಠ, ಬನಶಂಕರಿಗೆ ಡಾ.ಬಾಲಸುಬ್ರಮಣಿಯಮ್, ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಪಿಯು ಕಾಲೇಜಿನ ೨೦೨೪ನೇ ರ‍್ಷದ ಟಾಪರ್ ಸಂಜನಾಗೆ ಡಾ.ಸಿ.ಆರ್.ಚಂದ್ರಶೇಖರ, ಸಂತೋಷಿಗೆ ಶಿಕ ದಿ.ವಿ.ಜೆ.ಬಳಿಗಾರ ಹೆಸರನಲ್ಲಿ ಸ್ಕಾಲರ್ಶಿಪ್ ಸಹಕಾರ ಪುರಸ್ಕಾರ ನೀಡಿ ಅದರ ಮೆಡಿಕಲ್ ಅಧ್ಯಯನ ಮುಗಿಯುವವರೆಗೆ ಸ್ಕಾಲರ್ಶಿಪ್ ಪಡೆಯುಲು ಅಗತ್ಯ ಸಹಕಾರ ಉಚಿತ ನೀಡುವ ಕೆಲಸ ಮಾಡುತ್ತಿದ್ದೇವೆ. ಅವರ ಮೆಡಿಕಲ್ ಅಧ್ಯಯನ ಯಾವುದೇ ಆತಂಕವಿಲ್ಲದೆ ಸಾಗಲು ಬೇಕಾಗಿರುವಷ್ಟು ಮೊತ್ತ ಸ್ಕಾಲರ್ಶಿಪ್ ಅವರಿಗೆ ಲಭ್ಯವಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ.೯೯೮೦೪೩೮೬೦೦, ೯೬೦೬೨೪೮೬೧೦ಕ್ಕೆ ಸಂರ‍್ಕೀಸಬಹುದು ಎಂದರು.
ಎಸ್.ಎಸ್.ಹಿರೇಮಠ, ರಾಜಶೇಖರ ಲೋಣಿಮಠ, ಬನಶಂಕರಿ ಇತರರಿದ್ದರು.