ಆಸ್ಪತ್ರೆಯ ನೌಕರರಿಗೆ ನಿಸರ್ಗ ಸಿರಿ ಪ್ರಶಸ್ತಿ

3sirsi1
Published on

ಶಿರಸಿ: ಆರೋಗ್ಯ ಕ್ಷೇತ್ರಕ್ಕೆ ಪೂರಕವಾದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅನಂತರಾವ್ ಬಿಳಗಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಡಿ. ವಿಶ್ವಾಮಿತ್ರ ಹೇಳಿದರು. ಇಲ್ಲಿನ ಅನಂತರಾವ್ ಬಿಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಹಾಗೂ ದಾವಣಗೆರೆಯ ಹಲೋ ಕನ್ನಡಿಗ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ನಿಸರ್ಗ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಸರ್ಗ ಆಸ್ಪತ್ರೆ ರೋಗಿಗಳ ರೋಗ ನಿವಾರಣೆ ಮಾಡುವುದಲ್ಲದೆ, ಸಮಾಜದ ಆರೋಗ್ಯ ಸೇವೆಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದೆ. ಇಂಥ ಆರೋಗ್ಯ ಸೇವೆ ನೀಡಲು ಇಲ್ಲಿನ ಸಿಬ್ಬಂದಿ ಪರಿಶ್ರಮ ಕಾರಣವಾಗಿದೆ ಎಂದರು.

ನಿಸರ್ಗ ಟ್ರಸ್ಟ್ ಅಧ್ಯಕ್ಷ ಡಾ. ವೆಂಕಟ್ರಮಣ ಹೆಗಡೆ ಮಾತನಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಪ್ರಕೃತಿ ಚಿಕಿತ್ಸೆಯನ್ನು ಅಳವಡಿಕೊಂಡು ರೋಗಗಳಿಂದ ದೂರವಿರಬೇಕು ಎಂದರು.

ಈ ವೇಳೆ ನಿಸರ್ಗ ಸಿರಿ ಪ್ರಶಸ್ತಿಯನ್ನು ಆಸ್ಪತ್ರೆ ಸಿಬ್ಬಂದಿ ವಿಘ್ನೕಶ್ವರ ಮಡಿವಾಳ ಮತ್ತು ಭಾಗ್ಯಶ್ರೀ ನಾಯ್ಕ ಅವರಿಗೆ ನೀಡಿ ಸನ್ಮಾನಿಸಲಾಯಿತು. ಉತ್ತಮ ಸಿಬ್ಬಂದಿ ಪ್ರಶಸ್ತಿಯನ್ನು ಗಣೇಶ ಮಡಿವಾಳ, ದೇವಿಕಾ ನಾಯರ್, ಪೂಜಾ ಗೊಖಲೆ, ಅನುಪಮಾ ಭಟ್ಟ, ರೇಷ್ಮಾ ರಾವ್, ರೇಖಾ ಗೌಡ, ಅಂಕಿತಾ ನಾಯ್ಕ ಹಾಗೂ ಪುಷ್ಪಾ ಹರಿಜನ ಅವರಿಗೆ ನೀಡಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಟ್ರಸ್ಟ್ ಕಾರ್ಯದರ್ಶಿ ರಾಮಾ ಜೋಶಿ, ಟ್ರಸ್ಟಿ ಡಾ. ಸಂತೋಷ ನಾಡಿಗೇರ, ಡಾ. ಜಿತೇಶ ಪಿ., ನಿಸರ್ಗ ಸಿರಿ ಪ್ರಶಸ್ತಿಯ ಸಂಸ್ಥಾಪಕ ವೇದಮೂರ್ತಿ ಸಿ. ಇತರರಿದ್ದರು. ಕೈವಲ್ಯ ಹೆಗಡೆ ಪ್ರಾರ್ಥಿಸಿದರು. ಆಸ್ಪತ್ರೆ ವ್ಯವಸ್ಥಾಪಕ ಪ್ರಕಾಶ ಭಟ್ಟ ನಿರೂಪಿಸಿದರು. ಡಾ. ವಿನಾಯಕ ಹೆಬ್ಬಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net