ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಲು ಮನವಿ

15-hvr-06
Published on

ಹಾವೇರಿ:ತಾಲೂಕಿನ ನೆಗಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶುಕ್ರವಾರ ಆರೋಗ್ಯ ಕೇಂದ್ರದ ಕಾರ್ಯನಿರತ ವೈದ್ಯ ಡಾ. ಬಸವರಾಜ ಎಲ್.ಪಿ., ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡ್ರೀಮ್ ನೆಗಳೂರ ಯೂತ್ ಕ್ಲಬ್ ಅಧ್ಯಕ್ಷ ಗಿರೀಶ ಅರಳಿಮರದ ಮಾತನಾಡಿ, ಗ್ರಾಮದಲ್ಲಿ 15ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಜತೆಗೆ ಪಕ್ಕದ ಕೋಡಬಾಳ, ಹಾಲಗಿ, ಮರೋಳ ಗ್ರಾಮಗಳ ಜನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆದರೆ, ಇಲ್ಲಿ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕೂಡಲೆ ಆರೋಗ್ಯ ಕೇಂದ್ರಕ್ಕೆ ಪ್ರಯೋಗಾಲಯ ಸಿಬ್ಬಂದಿ ನೇಮಕದ ಜತೆಗೆ 108 ವಾಹನ ಸೌಲಭ್ಯ 25 ಹಾಸಿಗೆಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಮನವಿ ಸ್ವೀಕರಿಸಿದ ಡಾ. ಬಸವರಾಜ ಎಲ್.ಪಿ., ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಬಸಮ್ಮ ಬಿಂಗಿ, ಮಂಜುನಾಥ ಅರಳಿಮರದ, ಚೇತನ ಬಿಷ್ಟನಗೌಡ್ರ, ಮಾಲತೇಶ ಮೈಲಾರ, ಬಸವರಾಜ ಮಾಲಶೆಟ್ಟರ, ರಮೇಶ ಶರಸೂರಿ, ಮಂಜುನಾಥ ಚಂದಣ್ಣನವರ, ಶಂಕರ ಕಡಾರಿ, ಜಯಂತ ಬಿಷ್ಟನಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net