

ಬಾಗಲಕೋಟೆ: ನಗರದ ವಿದ್ಯಾಗಿರಿಯ ಕೆಂಚಮ್ಮ ದೇವಿ ಆವರಣದಲ್ಲಿ ನರಗಾಸ್ತಿ ಮಾಲೀಕತ್ವದ ದಾಖಲೆ ಯೋಜನೆ ಅಡಿ ಅಳತೆಯಾದ ವಾರ್ಡ ನಂ ೩೨, ೩೩ ಹಾಗೂ ೩೫ ರ ಆಸ್ತಿಗಳ ಪಾಪರ್ಟಿ ಕಾರ್ಡ್ಗಳನ್ನು ಶಾಸಕ ವೀರಣ್ಣ ಚರಂತಿಮಠ ಶನಿವಾರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಇಲ್ಲಿವರೆಗೂ ನವನಗರ ಯುನಿಟ್-೧ ಮತ್ತು ೨, ವಿದ್ಯಾಗಿರಿ, ಮನಗೂಳಿ ಲೇ ಔಟ್, ಪೋಸ್ಟಲ್ ಕಾಲನಿ, ಬೆಂಡಿಗೇರಿ ಕಾಲನಿ, ಸೀಮಿಕೇರಿ, ಗದ್ದನಕೇರಿ, ಬಾಗಲಕೋಟೆ, ಸೀಗಿಕೇರಿ, ಮುಚಖಂಡಿ ಭಾಗಶಃ ಪ್ರದೇಶಗಳ ಒಟ್ಡು ೪೫೦೦೦ ಆಸ್ತಿಗಳ ಪೌಕಿ ಈಗಾಗಲೇ ೪೦೧೩೫ ಆಸ್ತಿಗಳ ಅಳತೆ ಕೆಲಸವನ್ನು ಪೂರೈಸಿದ್ದು, ೩೦೪೦೦ ಆಸ್ತಿಗಳ ಡಿಪಿಆರ್‌ಗಳನ್ನು ತಯಾರಿಸಿ ೧೭೦೦೦ ಆಸ್ತಿಗಳ ಪಿಡಿಆರ್ ಕಾರ್ಡಗಳನ್ನು ವಿತರಿಸಲಾಗಿದೆ ಎಂದರು.
ಡಿಪಿಆರ್ ಕಾರ್ಡ್ ನಲ್ಲಿ ಮಾಲೀಕರ ಹೆಸರು, ಆಸ್ತಿ ಅಳತೆ ನಕಾಶ, ದ್ರೋಣ ಆಧಾರಿತ ಅಳತೆಯ ಆಸ್ತಿಯ ಚಿತ್ರ, ಕ್ಷೇತ್ರ ಇತರೆ ಮಾಹಿತಿ ಇರುತ್ತದೆ. ಈ ಡಿಪಿಆರ್ ಕಾರ್ಡ್ ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಜನರು ತಮ್ಮ ಆಸ್ತಿಯ ವಿವರಗಳ ಅಽಕೃತ ದಾಖಲೆಗಳನ್ನು ಸಂಗ್ರಹಿಸವು ಜವಾಬ್ದಾರಿ ಕೂಡಾ ತಮ್ಮದಾಗಿದೆ. ಪ್ರತಿ ವರ್ಷ ಕೆಜೆಪಿ ಉತಾರ ಮತ್ತು ಸಿಟಿ ಸರ್ವೆ ಉತಾರ ತಮ್ಮಲ್ಲಿರಬೇಕು. ಆದ್ದರಿಂದ ಡಿಪಿಆರ್ ಕಾರ್ಡ ಪಡೆದುಕೊಂಡು ಅದರಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಾದಲ್ಲಿ ೩೦ ದಿನಗಳ ಒಳಗಾಗಿ ಆಕ್ಷೇಪಣೇ ಸಲ್ಲಿಸಿದರೆ ತಿದ್ದುಪಡಿ ಮಾಡಿಕೊಡಲಾಗುತ್ತದೆ ಎಂದರು.
ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರವಿಕುಮಾರ, ಮಹಾಂತೇಶ ಶೆಟ್ಟರ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸದಸ್ಯರಾದ ಭುವನೇಶ್ವರಿ ಕುಪ್ಪಸ್ತ, ಶೋಭಾ ರಾವ, ದ್ಯಾಮವ್ವ ಸೂಳಿಕೇರಿ, ಸಹಾಯಕ ಭೂದಾಖಲೆ ಅಽಕಾರಿಗಳಾದ ಎಸ್.ಪಿ.ಕಿರಗಿ, ಎಮ್.ಪಿ.ಗಡಾದ ಸೇರಿದಂತೆ ವಿದ್ಯಾಗಿರಿ ಪ್ರಮುಖರು ಭಾಗವಹಿಸಿದ್ದರು.