

ಯಲ್ಲಾಪುರ: ಕರೊನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಸೋಮವಾರ ಸೀರೆ ವಿತರಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ 1400 ಆಶಾ ಕಾರ್ಯಕರ್ತೆಯರಿಗೆ ತಲಾ ಎರಡು ಸೀರೆಗಳನ್ನು ವಿತರಿಸುವ ಉದ್ದೇಶ ಹೊಂದಿದ್ದೇನೆ. ಜಿಲ್ಲೆಯ ಎಲ್ಲ ಕಾರ್ಯಕರ್ತೆಯರಿಗೆ ಬಿಜೆಪಿ ಘಟಕಗಳ ಮೂಲಕ ಸೀರೆ ತಲುಪಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ, ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಧಾನ ಕಾರ್ಯದರ್ಶಿಗಳಾದ ಡಾ. ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ, ಖಜಾಂಚಿ ಮುರಳಿ ಹೆಗಡೆ, ಜಿ.ಪಂ. ಸದಸ್ಯೆ ಶ್ರುತಿ ಹೆಗಡೆ, ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಭಟ್ಟ, ಸದಸ್ಯೆ ರಾಧಾ ಹೆಗಡೆ, ಪ.ಪಂ. ಸದಸ್ಯರಾದ ಕಲ್ಪನಾ ನಾಯ್ಕ, ಶ್ಯಾಮಿಲಿ ಪಾಟಣಕರ್, ಗೀತಾ ದೇಶಭಂಡಾರಿ, ಪ್ರಮುಖರಾದ ಬಾಬಾಸಾಬ್ ಅಲನ್, ವಿವೇಕ ಹೆಬ್ಬಾರ, ವಿಜಯ ಮಿರಾಶಿ ಇತರರಿದ್ದರು.