

ಸುಂಟಿಕೊಪ್ಪ: ನಾಕೂರು ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಶಿವಮ್ಮ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ನಾಕೂರು ಗ್ರಾಮದ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರು ಸನ್ಮಾನಿಸಿದರು.
ಕಳೆದ 16 ವರ್ಷಗಳಿಂದ ನಾಕೂರು ಶಿರಂಗಾಲ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಎಸ್.ಶಿವಮ್ಮ ಅವರಿಗೆ ಸಂಜೀವಿನಿ ಒಕ್ಕೂಟದ ಬೆಳಕು ಮತ್ತು ಸಮುದ್ರ ಸಂಘದ ಸದಸ್ಯರು ಉತ್ತಮ ಸೇವೆಯನ್ನು ಪರಿಗಣಿಸಿ ಗ್ರಾಮದಲ್ಲಿ ಸನ್ಮಾನಿಸಿದರು.
ಸಂಜೀವಿನಿ ಒಕ್ಕೂಟದ ಎಂಬಿಕೆ ರಂಜಿನಿ, ಕೃಷಿಸಖಿ ಬ್ರಿಜಿತ್, ಸಂಘದ ಅಧ್ಯಕ್ಷರಾದ ಎ.ಪಿ.ಮೀನಾಕ್ಷಿ, ಎಚ್.ಎ.ರಶ್ಮಿ, ಉಪಾಧ್ಯಕ್ಷರು ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.