ಆಲೂರು ತಾಲೂಕಿಗೆ ಶೇ. 88.61 ಫಲಿತಾಂಶ

Published on

ಆಲೂರು: ಎಸ್‌ಎಸ್‌ಎಲ್‌ಸಿಯಲ್ಲಿ ಆಲೂರು ತಾಲೂಕಿಗೆ ಶೇ. 88.61 ಫಲಿತಾಂಶ ಲಭಿಸಿದ್ದು, ಜಿಲ್ಲೆಯಲ್ಲಿ ಎರಡನೇ ಸ್ಥಾನ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ 18 ಸರ್ಕಾರಿ ಪ್ರೌಢಶಾಲೆಗಳು, 3 ಸರ್ಕಾರಿ ವಸತಿ ಶಾಲೆಗಳು, 4 ಅನುದಾನಿತ ಹಾಗೂ 9 ಅನುದಾನ ರಹಿತ ಶಾಲೆಗಳಿಂದ ಒಟ್ಟು 940 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸರ್ಕಾರಿ ಪ್ರೌಢಶಾಲೆ ಹಂಪನಕುಪ್ಪೆ, ಹಂಚೂರು ಮತ್ತು ಮಡಬಲು, ಕೆ.ಹೊಸಕೋಟೆ ಎಸ್‌ಎಸ್‌ಕೆಎನ್‌ಆರ್‌ಎಚ್‌ಎಸ್ ಅನುದಾನಿತ ಪ್ರೌಢಶಾಲೆ, ಭೈರಾಪುರ ಭೆಥೆಸ್ಥಾ ಪ್ರೌಢಶಾಲೆ, ಚಿಕ್ಕಕಣಗಾಲು ಸೇಂಟ್ ಜೋಸೆಫ್ ಪ್ರೌಢಶಾಲೆ, ಮಗ್ಗೆ ಇನ್‌ಸ್ಪೈರ್ ಪ್ರೌಢಶಾಲೆ, ಬಿ.ಎಸ್.ಎನ್.ಎಚ್ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು ಮತ್ತು ಕಾರ್ಯನಿರ್ವಹಿಸಿದ ಎಲ್ಲರನ್ನೂ ಅಭಿನಂದಿಸಿದರು.

ಕದಾಳು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಚ್.ಕೆ.ಪೂಜಾ, ಎಂ.ಹೊಸಳ್ಳಿ ಮುರಾರ್ಜಿ ವಸತಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ.ಯು.ಚರಿತಾ 625 ಕ್ಕೆ 616 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಿಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಲ್.ದೀಕ್ಷಿತ್ 614 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭೈರಾಪುರ ಭೆಥೆಸ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎಂ.ಪಿ.ಭುವನ್ ಮತ್ತು ಬಿ.ಎಂ.ಚರಿತಾ ತಲಾ 613 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net