

ಬಾಗಲಕೋಟೆ: ಸಚಿವ ಆರ್.ಬಿ.ತಿಮ್ಮಾಪುರ ಜನುಮ ದಿನದ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಹಣ್ಣು, ಹಂಪಲು, ಬ್ರೇಡ್ ವಿತರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡ ಪೀರಪ್ಪ ಮ್ಯಾಗೇರಿ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪುರ ಎಲ್ಲ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾದರ್ಶ ಅಳವಡಿಸಿಕೊಂಡಿದ್ದಾರೆ. ಬಡವರು, ಕಾರ್ಮಿಕರ ಏಳಿಗೆ ಬಯಸುವ ನಾಯಕ. ಸಾಮಾಜಿಕ ಸಮಾನತೆಗೆ ಶ್ರಮಿಸುವ ಅವರು, ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ದಲಿತ ಸಮುದಾಯದವರಿಗೆ ಧ್ವನಿ ನೀಡಿದ ತಿಮ್ಮಾಪುರ ಅಪರೂಪದ ನಾಯಕರು. ಸಮಾಜದ ಒಳ ಮಿಸಲಾತಿ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ದಲಿತರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಸಚಿವರಾಗಿದ್ದಾಗ ಸದಾಶಿವ ಆಯೋಗ ರಚನೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು. ರಾಜ್ಯದಲ್ಲಿ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಲ್ಲಿ ಆರ್.ಬಿ.ತಿಮ್ಮಾಪುರ ಅವರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.
ಮುಖಂಡರಾದ ಶಿವಾನಂದ ಮಾದರ, ಪರುಶುರಾಮ ತಳಗೇರಿ, ಅರ್ಜುನ ಹೊಸಮನಿ, ಮಂಜುನಾಥ ಯಡಹಳ್ಳಿ, ಬಾಬು ಮುರನಾಳ, ಕೆಂಚಪ್ಪ ತಳಗೇರಿ, ಹರ್ಷಾ ಹಿರೇಮನಿ, ಶ್ರವಣ ಖಾತೆದಾರ, ರವಿ ಮೇತ್ರಿ, ಸಂಗಮೇಶ ಬಳ್ಳಾರಿ, ಸದು ಬೂದಿಹಾಳ, ಮುದಕಪ್ಪ ಶೇಲ್ಲಿಕೇರಿ, ಮಾರುತಿ ಯಡಹಳ್ಳಿ, ಸಂಗಮೇಶ ಚಲವಾದಿ, ಸಾಬಣ್ಣ ಚಲವಾದಿ, ಚಾಂದ ನಧಾಪ, ವಿರುಪಾಕ್ಷಿ ಆಡಗಲ್ಲ, ದುರ್ಗಪ್ಪ ನೆಕ್ಕರಗುಂದಿ, ಪ್ರಕಾಶ ಮ್ಯಾಗೇರಿ, ಪುಂಡಲೀಕ ಸಿಂದಗಿ, ಯಮನಪ್ಪ ನೆಕ್ಕರಗುಂದಿ, ಶಿವು ಹೊನ್ನಳ್ಳಿ, ಅಪ್ಪು ಸೂರಕೊಪ್ಪ, ರವಿ ಗದ್ದನಕೇರಿ ಉಪಸ್ಥಿತರಿದ್ದರು.