ಆರ್‌ಎಸ್‌ಎಸ್ ಕೈಬೀಸಿ ಕರೆಯುತ್ತದೆ ಸಂಘದ ಶಾಖೆಗೆ ಬನ್ನಿ ಬನ್ನಿ

671c1ad9-e27e-494f-8575-cc64b8621bab
ಬಾಗಲಕೋಟೆ ಬಿವಿವಿ ಸಂಘದ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಆರ್‌ಎಸ್‌ಎಸ್‌ನ ಪಥಸಂಚನದ ಬಹಿರಂಗ ಸಭೆಯಲ್ಲಿ ಸಂಘದ ಕರ್ನಾಟಕ ಉತ್ತರದ ಪ್ರಾಂತ ಸಹ ಬೌದ್ಧಿಕ ರಾಮಚಂದ್ರ ಏಡಕೆ ಮಾತನಾಡಿದರು. ಉದ್ಯಮಿ ವಿಲಾಸ ಬದಾಮಿ, ಜಿಲ್ಲಾ ಸಂಘ ಚಾಲಕ ಚಂದ್ರಶೇಖರ ದೊಡ್ಡಮನಿ ವೇದಿಕೆಯಲ್ಲಿ ಇದ್ದರು.
Published on

ಬಾಗಲಕೋಟೆ: ಯಾರು ಎಷ್ಟೇ ಟೀಕೆ ಮಾಡಿದರೂ ಸಂಘ ಬೆಳೆಯುತ್ತಲೇ ಬಂದಿದೆ. ಇದೀಗ ಶತಾಬ್ಧಿ ಸಂಭ್ರಮದಲ್ಲಿ ಇದ್ದು, ಈ ವೇಳೆ ಆರ್‌ಎಸ್‌ಎಸ್, ಭಗವಾಧ್ವಜ ನಿಮ್ಮೆಲ್ಲರನ್ನು ಸಂಘದ ಶಾಖೆಗೆ ಬನ್ನಿ ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ಭಾರತ ದೇಶವನ್ನು ಜಗನ್ಮಾತೆ, ಜಗದಂಬೆ ಮಾಡಲು ಎಲ್ಲರೂ ಸಂಘಕ್ಕೆ ಬನ್ನಿ. ನೀವೆಲ್ಲರೂ ಬಂದಾಗ ಸಂಘದ ಶತಾಬ್ಧಿ ಸಂಭ್ರಮ ಸಾರ್ಥಕವಾಗುತ್ತದೆ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರದ ಪ್ರಾಂತ ಸಹ ಬೌದ್ಧಿಕ ರಾಮಚಂದ್ರ ಏಡಕೆ ಹೇಳಿದರು.

ನಗರದ ಬಸವೇಶ್ವರ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಆರ್‌ಎಸ್‌ಎಸ್‌ನ ವಿಜಯದಶಮಿ ಪಥಸಂಚಲನದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಸಂಘದ ಶತಾಬ್ಧಿ ಎಂದು ನಾವು ಸ್ಮರಣ ಸಂಚಿಕೆ, ಕಟ್ಟಡಗಳ ಉದ್ಘಾಟನೆ, ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಬದಲಿಗೆ ರಾಷ್ಟಿçÃಯ ವಿಚಾರಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸಬೇಕು ಎನ್ನುವುದು ನಮ್ಮ ಉದ್ಧೇಶವಾಗಿದೆ. ಭಾರತ ಮಾತಾ ಕೀ ಜೈ ಎನ್ನುವುದು ಸಂಘದ ಸೂತ್ರ, ಮಂತ್ರ, ವೇದ ಮಂತ್ರ, ವೇದ ಘೋಷ, ಘೋಷ ವಾಕ್ಯವಾಗಿದೆ. ನೂರು ವರ್ಷದ ಇತಿಹಾಸದಲ್ಲಿ ಅನೇಕರು ಟೀಕೆ ಮಾಡಿದರು. ಅದ್ಯಾವುದಕ್ಕೂ ತಗ್ಗದೇ ಸಂಘ ಬೆಳೆಯುತ್ತಲೇ ಇದೆ. ಐ ಲವ್ ಮಹಾದೇವ ಎಂದು ಏಡಕೆ ಅವರು, ಅದು ದೇವನೂರ ಮಹಾದೇವ ಅಲ್ಲ, ಪಾರ್ವತಿ ಪತಿ ಮಹಾದೇವ, ಶಿವಶಂಕರ ಮಹಾದೇವ ಎಂದು ಸಂಘದ ಬಗ್ಗೆ ಟೀಕೆ ಮಾಡುವ ದೇವನೂರ ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ಆರ್‌ಎಸ್‌ಎಸ್ ಯಾರನ್ನೂ ಸಹ ಜಾತಿಯಿಂದ ಗುರುತಿಸಲ್ಲ. ಬಡವ ಶ್ರೀಮಂತ ಎನ್ನಲ್ಲ, ವಿಜಿಟಿಂಗ್ ಕಾರ್ಡ್ ಕೇಳಲ್ಲ. ಕುಲಗೋತ್ರ ನೋಡಲ್ಲ, ಭಾಷೆಯನ್ನು ಕೇಳಲ್ಲ. ಎಲ್ಲರನ್ನು ಬನ್ನಿ ಬನ್ನಿ ಶಾಖೆಗೆ ಎಂದು ಕರೆಯುತ್ತದೆ. ಇಂದು ದೇಶದಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಯಲು ಕುಟುಂಬ ಬೆಳೆಯಬೇಕು. ಅಸ್ಪÈಶ್ಯತೆ ತೊಲಗಬೇಕು. ಕುಟುಂಬಕ್ಕೆ ಸಂವಿಧಾನ ಇಲ್ಲ, ಒಬ್ಬರಿಗೊಬ್ಬರು ಬದುಕುವುದೇ ಕುಟುಂಬ ಎಂದರು.

ನಮಸ್ತೆ ಸದಾ ವತ್ಸಲೆ ಆರ್‌ಎಸ್‌ಎಸ್ ಬ್ರ‍್ಯಾಂಡ್ ಅಲ್ಲ :

ನಮತ್ಸೆ ಸದಾ ವತ್ಸಲೆ ಮಾತೃಭೂಮೇ ಪ್ರಾರ್ಥನೆ ಆರ್‌ಎಸ್‌ಎಸ್ ಬ್ರ‍್ಯಾಂಡ್ ಅಲ್ಲ. ಅದನ್ನು ಬೇರೆಯವರು ಯಾಕೆ ಹೇಳಬಾರದು? ಇತ್ತೀಚಿಗೆ ನಮ್ಮ ಪ್ರಾರ್ಥನೆಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ವಿಧಾನಸಭೆಯಲ್ಲಿ ಅದು ಆರ್‌ಎಸ್‌ಎಸ್‌ನ್ನು ಒಪ್ಪದವರು ಪ್ರಾರ್ಥನೆ ಹೇಳಿದರು. ಇದು ದೇಶ-ವಿದೇಶಗಳಲ್ಲೂ ಚರ್ಚೆಯಾಯಿತು. ದುರ್ದೈವ ಎಂದರೆ ಪ್ರಾರ್ಥನೆ ಹೇಳಿದ ಎರಡನೇ ದಿನಕ್ಕೆ ಅವರು ಕ್ಷಮೆ ಕೋರಿದ್ದು ಯಾಕೆ ಎಂದು ಪ್ರಶ್ನಿಸಿದರು.

ಕ್ಷಮೆ ಕೇಳಲು ಅವರು ಮಾಡಿದ್ದ ಅಪರಾಧ ಏನು? ತಪ್ಪೇನಿತ್ತು? ಏನು ಮೋಸ ಮಾಡಿದ್ದರು? ಪ್ರಾರ್ಥನೆ ದೇಶಭಕ್ತಿ ಕಲಿಸುತ್ತದೆ. ಸಮಾಜದ ಕೆಲಸ, ದೇಶದ ಕೆಲಸ ಮಾಡುವವರಿಗೆ ಪ್ರೇರಣೆ ನೀಡುವ ಪ್ರಾರ್ಥನೆಯಾಗಿದೆ. ಅವರು ಕ್ಷಮೆ ಕೇಳಿದ್ದು ಸರಿ. ಕಾರಣ ದೇಶವನ್ನು ತುಂಡು ಮಾಡಿದವರಿಗೆ ಭಾರತ ಮಾತಾ ಕೀ ಜೈ ಎನ್ನಲು ಆಗಲ್ಲ. ವಂದೇ ಮಾತರಂ ತುಂಡು ಮಾಡಿದವರಿಗೆ ಭಾರತ ಮಾತಾ ಕೀ ಜೈ ಎನ್ನಲು ಆಗಲ್ಲ. ವಿದೇಶಕ್ಕೆ ಹೋಗಿ ಭಾರತಕ್ಕೆ ಅಪಮಾನ, ಅವಹೇಳನ ಮಾಡುವ ಈ ಪ್ರಾರ್ಥನೆಯನ್ನು, ಭಾರತ ಮಾತಾ ಕೀ ಜೈ ಎಂದು ಹೇಗೆ ಹೇಳುತ್ತಾರೆ? ವಿದೇಶಿಯರು ಆರಂಭಿಸಿದ ಪಕ್ಷದವರಿಗೆ ಮಾತೃಭೂಮೇ ಹೇಗೆ ಪಚನ ಆಗಬೇಕು ಎಂದು ಹೆಸರು ಹೇಳದೇ ಕಾಂಗ್ರೆಸ್ಸಿಗರನ್ನು ಚುಚ್ಚಿದರು.

ಪಂಚಪರಿವರ್ತನೆ:

ಆರ್‌ಎಸ್‌ಎಸ್ ನೂರು ವರ್ಷ ಮೌನ ತಪಸ್ಸು ಮಾಡಿದೆ. ಈ ಸಂದರ್ಭದಲ್ಲಿ ೫ ಅಂಶಗಳನ್ನು ಒಳಗೊಂಡ ಪಂಚ ಪರಿವರ್ತನೆಯನ್ನು ಸಮಾಜದ ಮುಂದೆ ಇಟ್ಟಿದೆ,. ನಾಗರಿಕ ಶಿಷ್ಠಾಚಾರ, ಕುಟುಂಬ, ಪ್ರಬೋಽನಿ, ಪರಿಸರ, ಸ್ವದೇಶಿ. ಹಿಂದು ಧರ್ಮದ ಆತ್ಮ ಎಂದರೆ ಅದು ಕುಟುಂಬ. ಆ ಕುಟುಂಬ ವ್ಯವಸ್ಥೆ ಸರಿಯಾಗಿರುವುದಕ್ಕೆ ಶಿವಾಜಿ ಛತ್ರಪತಿಯಾದ, ನರೇಂದ್ರ ಸ್ವಾಮೀ ವಿವೇಕಾನಂದರಾಗಿ ಸಾಧನೆ ಮಾಡಿದರು ಎಂದು ತಿಳಿಸಿದರು.

ಮಾತೃಭಾಷೆ ಬಿಡಬಾರದು :

ಎಲ್ಲ ಭಾಷೆಗಳನ್ನು ಕಲಿಯಲು ಯಾವುದೇ ತರಕಾರು ಇಲ್ಲ. ಆದರೆ, ಮಾತೃಭಾಷೆಯನ್ನು ಓದಬೇಕು, ತಿಳಿದುಕೊಳ್ಳಬೇಕು. ಮಾತೃಭಾಷೆ ತಿಳಿಯಲಿಲ್ಲ ಎಂದರೆ ಶರಣರ ವಚನಗಳನ್ನು ಯಾರು ಅರ್ಥ ಮಾಡಿಕೊಳ್ಳಬೇಕು? ದಾಸರ ಸಾಹಿತ್ಯವನ್ನು ಯಾರು ಓದಬೇಕು? ಹೀಗಾಗಿ ಮಾತೃಭಾಷೆಯನ್ನು ಬಿಡಬಾರದು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಲಾಸ ಬದಾಮಿ, ಜಿಲ್ಲಾ ಸಂಘ ಚಾಲಕ ಚಂದ್ರಶೇಖರ ದೊಡ್ಡಮನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net