

ಬೆಂಗಳೂರು:ಆರೋಗ್ಯ, ಪರಿಸರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರೈಸ್ಟ್ ಅಕಾಡೆಮಿ ಇನ್ಸಿಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಡಡಿಸ್(ಸಿಎಐಎಎಸ್) ಆಯೋಜಿಸಿದ್ದ "ಗ್ರೀನ್ ರನ್' ವಾಕಥಾನ್ನಲ್ಲಿ ಮಳೆ ನಡುವೆಯೂ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಿಎಐಎಎಸ್ ಕ್ಯಾಂಪಸ್ನಿಂದ ಆರಂಭವಾದ ವಾಕಥಾನ್ ವಿವಿಧ ವೃತ್ತಗಳ ಮೂಲಕ 7 ಕಿ.ಮೀ.ವರೆಗೆ ಸಾಗಿ ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತದ ವೇಲಂಕಣಿ ಟೆಕ್ಪಾರ್ಕ್ನಲ್ಲಿ ಸಮಾಪ್ತಿಗೊಂಡಿತು. ವಾಕ್ಥಾನ್ನಲ್ಲಿ ಉತ್ತಮ ಆರೋಗ್ಯ ಮೂಲಕ ಬದುಕು ನಡೆಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಯಿತು.
ಕ್ರೈಸ್ಟ್ ಅಕಾಡೆಮಿ ಗ್ರೂಪ್ ಇನ್ಸಿಸ್ಟಿಟ್ಯೂಟ್ ನಿರ್ದೇಶಕ ಫಾದರ್ ಸೆಬಿ ಪಾಲಮಟ್ಟತ್, ನಾರಾಯಣ ಹೆಲ್ತ್ನ ಡಾ.ಬಿ.ಎನ್.ಪ್ರಶಾಂತ್, ವ್ಯಾಕಥಾನ್ ಕುರಿತು ಮಾಹಿತಿ ನೀಡಿದರು. ಆರು ವಿಭಾಗಗಳಲ್ಲಿ ವಿಜೇತರಾದವರಿಗೆ ಹನನ್ ದೆಲ್ವಿ, ನಾರಾಯಣ ಹೆಲ್ತ್ನ ಡಾ.ಪಿ.ಪ್ರವಿಣ್ ಬಹುಮಾನ ವಿತರಿಸಿದರು. 140 ವಿದ್ಯಾರ್ಥಿಗಳು ಸ್ವಯಂಸೇವಕ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ಯಶಸ್ವಿಗೆ ಕಾರಣೀಭೂತರಾದರು. ಸಿಎಐಎಎಸ್ ಪ್ರಾಂಶುಪಾಲ ಫಾದರ್ ಅಂಟೋನಿ ಡೇವಿಸ್, ಎಸ್ಸಿಇಎಡಿ ಫೌಂಡೇಷನ್ ಸಂಸ್ಥಾಪಕ ಸಿಜು ಡೇನಿಯಲ್, ಅರಣ್ಯ ಇಲಾಖೆ ಅಧಿಕಾರಿ ಸಂತೋಷ್ ಮತ್ತಿತರರಿದ್ದರು.