ಭಾರತವು ಶೇ.100 ಸಾಕ್ಷರತೆ ರಾಷ್ಟ್ರಕ್ಕೆ ಕೈಜೋಡಿಸಿ: ಶಂಕರ್​ ಬಿದರಿ ಅಭಿಮತ

shankar
Published on

ಬೆಂಗಳೂರು: ಭಾರತವನ್ನು ಶೇ.100ರಷ್ಟು ಸಾಕ್ಷರತೆ ರಾಷ್ಟ್ರವನ್ನಾಗಿಸಲು ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ನಿವೃತ್ತ ಪೊಲೀಸ್​ ವರಿಷ್ಠಾಧಿಕಾರಿ ಶಂಕರ್​ ಬಿದರಿ ಅಭಿಪ್ರಾಯಪಟ್ಟರು.

ಕಾಗ್ನಿಟಿವ್​ ಫ್ಯೂಷನ್​ ವತಿಯಿಂದ ಇಂದಿರಾನಗರ ಕ್ಲಬ್​ನಲ್ಲಿ ಸೋಮವಾರ ಆಯೋಜಿಸಲಾಗಿದ್ದ "ಎಜುಕೇಷನ್​ ಹೀರೋಸ್​' ಸಮಾರಂಭದಲ್ಲಿ ಮಾತನಾಡಿದರು.

ದೇಶದಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾದರೂ ಸಾಕಷ್ಟು ಜನರು ಅನಕ್ಷರತೆಯಿಂದ ಕೂಡಿರುವುದು ವಿಷಾದಕರ ಸಂಗತಿ. ನಮ್ಮ ದೇಶವನ್ನು ಪೂರ್ಣ ಪ್ರಮಾಣದಲ್ಲಿ ಸಾಕ್ಷರತೆ ರಾಷ್ಟ್ರವನ್ನಾಗಿಸಲು ಎಲ್ಲರೂ ಒಟ್ಟಾಗಬೇಕಿದೆ. ತತ್ವ, ನೈತಿಕತೆಯ ಸದೃಢ ತಳಹದಿಯಲ್ಲಿ ಸರ್ಕಾರ ಮತ್ತು ಸಮಾಜ ನಡೆಯುತ್ತದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಬೇಕು. ಶಿಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಯು ಪಡೆದುಕೊಳ್ಳುವ ಕೌಶಲಕ್ಕೆ ಪಾಲಕರು ಸಾಕಷ್ಟು ಹಣ ವ್ಯಯಿಸುತ್ತಾರೆ. ಅದು ಸಮಾಜಕ್ಕೆ ಫಲಪ್ರದವಾದರೆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುವ ಜತೆಗೆ ಸಮಾಜಕ್ಕೂ ಅನುಕೂಲವಾಗಲಿದೆ ಎಂದರು.

ಪ್ರತಿ ವರ್ಷ ದೇಶಾದ್ಯಂತ 15 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಮುಗಿಸಿ ಹೊರ ಬರುತ್ತಾರೆ. ಉದ್ಯೋಗ ಪಡೆಯದೆ ನಿರುದ್ಯೋಗಿಯಾದರೆ ವಿದ್ಯಾರ್ಥಿಗಳ ಕಲಿತಿರುವ ಕೌಶಲ ವ್ಯರ್ಥವಾಗುತ್ತದೆ. ಆದ್ದರಿಂದ, ಪ್ರತಿವರ್ಷ ಇಂದಿನ ಅಗತ್ಯವನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಶಂಕರ್​ ಬಿದರಿ ಸಲಹೆ ನೀಡಿದರು.ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಐಶ್ವರ್ಯ ಡಿಕೆಎಸ್​ ಹೆಗ್ಡೆ ಸೇರಿ 40 ಸಾಧಕರನ್ನು ಸನ್ಮಾನಿಸಲಾಯಿತು. ಕ್ರೆಡೈ ಬೆಂಗಳೂರು ಅಧ್ಯಕ್ಷ ಅಮರ್​ ಮೈಸೂರು, ಕಾಗ್ನಿಟಿವ್​ ಫ್ಯೂಷನ್​ ಸಂಸ್ಥಾಪಕರಾದ ಅನುಶ್ರುತ್​ ಮಂಚಿ, ಪವನ್​ ಜೋಶಿ, ಡಾ. ವಿನಯ್​ ಕುಮಾರ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net