ಆರೋಗ್ಯ ಇಲಾಖೆ ಹೊರಗುತ್ತಿಗೆ ನೇಮಕಾತಿ ಅನಧಿಕೃತ

0cf7c712-d788-4279-ad25-42c3b6570094
ಡಿಎಚ್‌ಒ
Published on

ಬಾಗಲಕೋಟೆ: ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ವಿವಿಧ ಹುದ್ದೆಗಳ ನೇಮಕಾತಿ ಕ್ರಮಬದ್ಧವಾಗಿ ನಡೆಯದೇ ನಿಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸದ್ಯ ನೇಮಕಗೊಂಡು ಕೆಲಸ ಹಾಜರಾಗಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ನಿಯಮನುಸಾರ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ದೇಶನ ನೀಡುವಂತೆ ಜಿಪಂ ಸಿಇಒ ಶಶಿಧರ ಕುರೇರ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆಯ ಹಿಂದಿನ ಡಿಎಚ್‌ಒ ಡಾ.ರಾಜಕುಮಾರ ಯರಗಲ್ಲ ಅವರ ಆಡಳಿತ ಅವಧಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ೨೦.೦೯.೨೦೨೩ ರಿಂದ ೨೧.೦೬.೨೦೨೪ರ ಅವಽಯಲ್ಲಿ ೮೦ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಇಲ್ಲಿ ನೇಮಕಾತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಡಾ.ಯರಗಲ್ಲ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಸಿಇಒ ಅವರ ಉಲ್ಲೇಖದ ಮೇರಿಗೆ ಜುಲೈ ೨೯ ರಂದು ತಮ್ಮ ನಿವೃತ್ತಿಯ ಎರಡು ದಿನಗಳ ಮೊದಲು ಡಿಎಚ್‌ಒ ಹುದ್ದೆಯಲ್ಲಿದ್ದ ಡಾ.ಜಯಶ್ರೀ ಎಮ್ಮಿ, ಎನ್‌ಎಚ್‌ಎಂ ಅಡಿಯಲ್ಲಿ ಆರೋಗ್ಯ ಸಂಸ್ಥೆಗಳಲ್ಲಿ ಹಾಜರಾಗಿರುವ ಅಭ್ಯರ್ಥಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ವರದಿ ಸಲ್ಲಿಸುವಂತೆ ಎಲ್ಲ ತಾಲೂಕು ಆಸ್ಪತ್ರೆಗಳು, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪತ್ರ ಬರೆದಿದ್ದಾರೆ.

ಡಿಎಚ್‌ಒ ಹುದ್ದೆಗಾಗಿ ನಡೆದಿದ್ದ ಪೈಟ:
ಬಾಗಲಕೋಟೆ ಡಿಎಚ್‌ಒ ಹುದ್ದೆಗಾಗಿ ಡಾ.ಜಯಶ್ರೀ ಎಮ್ಮಿ ಹಾಗೂ ಡಾ.ರಾಜಕುಮಾರ ಯರಗಲ್ಲ ನಡುವೆ ಸುದೀರ್ಘ ಹೋರಾಟ ನಡೆದಿತ್ತು. ಜಯಶ್ರೀ ಎಮ್ಮಿ ಅವರು ಡಿಎಚ್‌ಒ ಇದ್ದಾಗ, ಅವರ ನಿವೃತ್ತಿಗೆ ಒಂದು ವರ್ಷ ಇರುವಾಗಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ಡಾ.ರಾಜಕುಮಾರ ಯರಗಲ್ಲ ಅವರನ್ನು ನೇಮಕ ಮಾಡಿತ್ತು. ಈ ವೇಳೆ ಇಬ್ಬರ ನಡುವೆ ಕಾನೂನು ಹೋರಾಟ ನಡೆಸಿದ್ದರು. ಡಾ.ರಾಜಕುಮಾರ ಅವರು ಡಿಎಚ್‌ಒ ಹುದ್ದೆಯಲ್ಲಿ ಮುಂದುವರೆದಿದ್ದು. ಕಳೆದ ತಿಂಗಳು ಜಯಶ್ರೀ ಎಮ್ಮಿ ಅವರು ನ್ಯಾಯಾಲಯದ ಸೂಚನೆ ಮೇರಿಗೆ ಡಿಎಚ್‌ಒ ಹುದ್ದೆಗೆ ಬಂದರು. ಜಯಶ್ರೀ ಎಮ್ಮಿ ಅವರು ಡಿಎಚ್‌ಒ ಇದ್ದಾಗ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಬಳಿಕ ಡಾ.ರಾಜಕುಮಾರ ಅವಧಿಯಲ್ಲಿ ನೇಮಕಾತಿ ಆದೇಶ ಹೊರಡಿಸಿದ್ದರು. ಆದರೆ, ನೇಮಕಾತಿ ನಿಯಮಬದ್ಧವಾಗಿ ನಡೆದಿಲ್ಲ. ಜಿಲ್ಲಾ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾಗಿರುವ ಜಿಪಂ ಸಿಇಒ ಅವರ ಗಮನಕ್ಕೆ ತಂದಿರಲಿಲ್ಲ ಎನ್ನುವ ಆರೋಪ ಇತ್ತು. ಈ ಹಿನ್ನಲೆ ಡಾ. ಜಯಶ್ರೀ ಎಮ್ಮಿ ಅವರು ಡಿಎಚ್‌ಒ ಆಗಿದ್ದ ವೇಳೆ ಸಿಇಒ ಅವರಿಗೆ ನೇಮಕಾತಿಯಲ್ಲಿ ಏಕಪಕ್ಷೀಯ ತೀರ್ಮಾನವಾಗಿದೆ. ಆಯ್ಕೆಯಾದವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಪತ್ರ ಬರೆದಿದ್ದರು. ಡಾ.ಎಮ್ಮಿ ಅವರ ವರದಿ ಆಧರಿಸಿ ಸಿಇಒ ಅವರು ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net