ಆರೋಗ್ಯಕರ ಸಮಾಜ ನಿರ್ವಿುಸೋಣ

27mnd1
Published on

ಮುಂಡಗೋಡ: ಸರ್ಕಾರ ಹಾಗೂ ಜನಸಾಮಾನ್ಯರೆಲ್ಲ ಒಟ್ಟಿಗೆ ಸೇರಿ ಈ ಕರೊನಾ ಕಾಯಿಲೆ ವಿರುದ್ಧ ಹೋರಾಡಿ ಒಂದು ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಮೂಲಕ ಆರೋಗ್ಯಕರ ಸಮಾಜ ನಿರ್ವಣಕ್ಕೆ ಅಡಿಪಾಯ ಹಾಕೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿದ ಅವರು ಕರೊನಾ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ಶಾರೀರಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ರಾಜ್ಯದ ಜನರ ಆರೋಗ್ಯ ಹಾಗೂ ಜೀವ ಎರಡೂ ಮುಖ್ಯ ಆ ಕಾರಣಕ್ಕಾಗಿ ಸರ್ಕಾರ ಕೆಲವು ಗಟ್ಟಿ ನಿರ್ಧಾರ ತೆಗೆದುಕೊಂಡ ಪರಿಣಾಮ ಜನರಿಗೆ ಕಷ್ಟವಾದರು ಸಹ ತಾಲೂಕಿನ ಜನರು ಸ್ಪಂದಿಸಿದ್ದಾರೆ ಎಂದರು.

ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲು ಲಾಕ್​ಡೌನ್​ನಿಂದ ವಿನಾಯಿತಿ ನೀಡಿದ್ದು ಈ ಬಗ್ಗೆ ತಮ್ಮ ಭಾಗದ ರೈತರಿಗೆ ವಿಷಯ ತಲುಪಿಸಬೇಕು ಎಂದರು. ನಂತರ ಅವರು ತಾಲೂಕಿನ ಕೋಡಂಬಿ, ಪಾಳಾ, ಓಣಿಕೇರಿ ಮತ್ತು ಕಾತೂರ ಗ್ರಾಮಗಳಿಗೆ ಭೇಟಿ ನೀಡಿದರು.

ಈ ವೇಳೆ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ, ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಚಲವಾದಿ, ಗುಡ್ಡಪ್ಪ ಕಾತೂರ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net