ಆರು ಜನ ಬೈಕ್ ಕಳ್ಳರ ಬಂಧನ

arrested
Published on

ನಿಪ್ಪಾಣಿ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿ, ಅಂದಾಜು 3 ಲಕ್ಷ ರೂ. ಮೌಲ್ಯದ 5 ವಾಹನ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಬೌದ್ಧನಗರದ ಪ್ರವೀಣ ಚೌಗುಲೆ, ಪಾಂಗಿರೆ(ಬಿ) ಗ್ರಾಮದ ಪ್ರಶಾಂತ ಕಾಂಬಳೆ, ಶಿರಗುಪ್ಪಿಯ ಸ್ವಪ್ನಿಲ್ ಚವ್ಹಾಣ, ಸ್ಥಳೀಯ ತಹಸೀಲ್ದಾರ್ ಪ್ಲಾಟ್‌ನ ನದೀಮ್ ಪಠಾಣ, ಅಮನ್ ಕಂದಲೆ, ಶಿರಗುಪ್ಪಿಯ ಪ್ರಥಮೇಶ ಐವಾಳೆ ಬಂಧಿತರು.

2024ರ ಡಿ 3ರಂದು ಸ್ಥಳೀಯ ಎಂಜಿಎಂ ಆಸ್ಪತ್ರೆಯ ಮುಂದೆ ಪಾರ್ಕಿಂಗ್ ಶೆಡ್‌ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನ ಕಳುವಾಗಿದೆ ಎಂದು ಚಿಕ್ಕೋಡಿ ತಾಲೂಕಿನ ಉಮರಾಣಿ ಅನಿಲ ಸನದಿ ಸ್ಥಳೀಯ ಶಹರ್ ಪೊಲೀಸ್ ಠಾಣೆಯಲ್ಲಿ ಡಿ 9ರಂದು ಪ್ರಕರಣ ದಾಖಲಿಸಿದ್ದರು.

ಮಂಗಳವಾರ ಪೊಲೀಸರು ವಾಹನಗಳ ದಾಖಲೆ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಕಳುವಾಗಿದ್ದ ಬೈಕ್ ಪತ್ತೆಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಆರೋಪಿತರು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net