

ಬಾಗಲಕೋಟೆ: ಲೋಕಸಭಾ ಚುನಾವಣೆಯು ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಚುನಾವಣೆ ಪೂರ್ಣಗೊಳ್ಳುವವರೆಗೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಆಯುಧ ಲೈಸನ್ಸ್ ಹೊಂದಿರುವವರು ತಮ್ಮ ಆಯುಧಗಳನ್ನು ಸಂಬAಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ದಿನಾಂಕದಿAದ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳು ವರೆಗೆ ವಿಇಧ ಉದ್ದೇಶದ ಸಲುವಾಗಿ ಧಾರಣ ಮಾಡಿದ ಯಾವುದೇ ಬಗೆಯ ಆಯುಧಗಳನ್ನು ಪರವಾನಿಗೆದಾರರಾಗಲಿ ಅಥವಾ ಅವರ ರಿಟೇನರ್ ಆಗಲಿ ತಮ್ಮ ಸಂಗಡ ಆಯುಧ ಕೊಂಡೊಯ್ಯುವದನ್ನು ನಿಷೇಧಿಸಲಾಗಿದೆ. ಆಯುಧದಾರರು ತಮ್ಮ ಆಯುಧಗಳನ್ನು ಮಾಚ್ ೨೧ ರೊಳಗಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿ ರಶೀದಿ ಪಡೆಯತಕ್ಕದ್ದು. ಬ್ಯಾಂಕ್ ಭದ್ರತೆ ಸಲುವಾಗಿ ತಮ್ಮ ಸಕ್ಕರೆ ಕಾರ್ಖಾನೆಗಳ ಭದ್ರತೆ ಸಲುವಾಗಿ ನೀಡಿರುವ ಆಯುಧ ಲೈಸನ್ಸ್ಗಳಿಗೆ ಅನ್ವಯಿಸುವದಿಲ್ಲ.
ಈ ಆದೇಶ ಬಾಗಲಕೋಟೆ ಜಿಲ್ಲೆಯಾದ್ಯಂತ ಅನ್ವಯವಾಗಲಿದ್ದು, ಠೇವಣಿ ಆದೇಶದಿಂದ ವಿನಾಯಿತಿ ಕೋರುವ ಶಸ್ತ್ರ ಪರವಾನಿಗೆದಾರರು ಮಾರ್ಚ ೨೧ ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಸದರಿ ಅರ್ಜಿಗಳನ್ನು ಸ್ಕ್ರೀನಿಂಗ್ ಕಮೀಟಿ ಮುಂದೆ ಮಂಡಿಸಿ ಅರ್ಜಿಗಳನ್ನು ಅವಶ್ಯಕತೆ, ನೈಜತೆಯ ಬಗ್ಗೆ ಪರಿಶೀಲಿಸಿ ಸಮಿತಿಯ ನಿರ್ಣಯದಂತೆ ವಿನಾಯಿತಿ ನೀಡುವ ಬಗ್ಗೆ ಕ್ರಮವಹಿಸಲಾಗುವುದೆಂದು ಆದೇಶದಲ್ಲಿ ತಿಳಿಸಿದ್ದಾರೆ.