ಆಯುಕ್ತ, ಸಿಬ್ಬಂದಿ ಕಾರ್ಯನಿರ್ವಹನೆ ಬಗ್ಗೆ ಸದಸ್ಯರ ಅಸಮಾಧಾನ

cc110ed6-fa6d-4ca2-a01a-f25d21380818
ಸದಸ್ಯ ಲಕ್ಷ್ಮಣ ಮುಚಖಂಡಿ
Published on

ಬಾಗಲಕೋಟೆ: ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸದಸ್ಯ ಲಕ್ಷ್ಮಣ ಮುಚಖಂಡಿ ಮಾತನಾಡಿ, ಬಾಗಲಕೋಟೆ, ನವನಗರ ಸ್ವಚ್ಛತೆ 80 ಜನರಿಂದ ಹೇಗೆ ಸಾಧ್ಯವಾಗುತ್ತದೆ. ಹೆಚ್ಚಿನ ಜನರನ್ನು ತೆಗೆದುಕೊಳ್ಳಬೇಕು ಎಂದರು.

ಶಾಂತಾ ಹನಮಕ್ಕನವರ ಮಾತನಾಡಿ, ಸೆಕ್ಟರ್ ನಂ.42ಕ್ಕೆ ನೀರು ಸರಿಯಾಗಿ ಬರುತ್ತಿಲ್ಲ. ಗಟಾರ ಸ್ವಚ್ಛ ಸಹ ಮಾಡುತ್ತಿಲ್ಲ ಎಂದು ದೂರಿದರು. ಬಿಟಿಡಿಎ ಅಧಿಕಾರಿಗಳ ಗೈರು ಹಾಜರಿಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಶ್ರೀನಿವಾಸ ಸಜ್ಜನ ಮಾತನಾಡಿ, ಅಂಗನವಾಡಿ ಮಂಜೂರು ಮಾಡಿ 2 ವರ್ಷ ಆಯಿತು. ಕಟ್ಟಡ ನಿರ್ಮಾಣ ಮಾಡಿಲ್ಲ. ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಸದಸ್ಯರಾದ ಲಕ್ಷ್ಮಿ ಚವಾಣ ಮಾತನಾಡಿ, ಹರಿಣಶಿಕಾರಿ ಕಾಲೋನಿಯಲ್ಲಿನ ಶೌಚಾಲಯಗಳ ನಿರ್ವಹಣೆ ಮಾಡದ್ದರಿಂದ ಬಳಕೆಯಾಗುತ್ತಿಲ್ಲ. ಅವರಿಗೆ ಹಕ್ಕುಪತ್ರಗಳನ್ನೂ ನೀಡಿಲ್ಲ. ಶೌಚಾಲಯಗಳ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ಸದಸ್ಯ ಚೆನ್ನವೀರಯ್ಯ ಮಾತನಾಡಿ, ಗಟಾರ ಸ್ವಚ್ಛ ಆಗುತ್ತಿಲ್ಲ. ಸರಿಯಾಗಿ ಮಾಡಬೇಕು ಎಂದರು.

ಸ್ವಚ್ಛತೆ ಟೆಂಡರ್ ಆಗಿದೆ. ಇನ್ನು ಮುಂದೆ ಸ್ವಚ್ಛತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net