ಆಯತಪ್ಪಿ ಗುಂಡಿಗೆ ಇಳಿದ ಸಾರಿಗೆ ಬಸ್

10 mlv 1
Published on

ಮಳವಳ್ಳಿ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆಯ ಬಸ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮಾರೇಹಳ್ಳಿ ಬಳಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಸಮೀಪದ ಗುಂಡಿಗೆ ಇಳಿದ ಪರಿಣಾಮ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿದ್ದಾರೆ.


ಚಾಲಕ ಮಹದೇವಸ್ವಾಮಿ, ನಿರ್ವಾಹಕ ಶಿವಕಾಳಯ್ಯ ಗಾಯಗೊಂಡವರು. ಬಸ್‌ನಲ್ಲಿ ಏಳೆಂಟು ಜನ ಪ್ರಯಾಣಿಕರಿದ್ದು, ಯಾವುದೇ ಅನಾಹುತವಾಗಿಲ್ಲ. ಮಳವಳ್ಳಿ ಡಿಪೋಗೆ ಸೇರಿದ ಬಸ್ ಗುರುವಾರ ಬೆಳಗ್ಗೆ 5.30ರಲ್ಲಿ ತಲಕಾಡಿನಿಂದ ಪಟ್ಟಣಕ್ಕೆ ಆಗಮಿಸುತ್ತಿತ್ತು. ಮಾರೇಹಳ್ಳಿ ಸಮೀಪ ನಾಲೆ ನೀರು ಹರಿದು ಹೋಗಲು ರಸ್ತೆ ಮಧ್ಯೆ ಸೇತುವೆ ಕಾಮಗಾರಿ ಮಾಡಲಾಗುತ್ತಿದೆ. ಮತ್ತೊಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಎರಡು ಬದಿಯಲ್ಲಿ ಮಣ್ಣಿನ ಗುಡ್ಡೆಗಳನ್ನು ಹಾಕಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಗುಂಡಿಗೆ ಇಳಿದಿದೆ.


ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net