ಆಮಿಷವೊಡ್ಡಿ 22 ಲಕ್ಷ ರೂ.ಮೋಸ

crime
Published on

ಕಲಬುರಗಿ: ಆನ್‌ಲೈನ್‌ನಲ್ಲಿ ಲೈಕ್ ಮತ್ತು ಶೇರ್ ಮಾಡಿ ಹಣ ಗಳಿಸಬಹುದು ಎಂದು ನಂಬಿಸಿ ೨೨.೦೨ ಲಕ್ಷ ರೂ. ವಂಚನೆ ಮಾಡಿರುವ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಾ ಕಾಲನಿಯ ಶೇಖ್ ಮಹ್ಮದ್ ಝಖಾರಿಯಾ ವಂಚನೆಗೆ ಒಳಗಾದವರು. ಹೊಟೇಲ್, ರೆಸ್ಟೋರೆಂಟ್ ಇತ್ಯಾದಿಗಳಿಗೆ ಲೈಕ್, ಶೇರ್ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ಬ್ಲಾÈಕ್‌ಮೌಂಟ್ ಟೆಕ್ನಾಲಜಿಸ್ ಪ್ರೆÊವೆಟ್ ಲಿಮಿಟೆಡ್ ಹೆಸರಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಮಾಡಿ, ಆಕಾಂಕ್ಷ ಮೇಗರ್, ರಾಧಾ ಭಟ್, ದರ್ಶಬಾಬು, ಶಿವಾನಿ, ಆಕಾಶ, ಮನೀಶ್ ಕೂಡಿಕೊಂಡು ಮೋಸದಿಂದ ೨೨.೦೨ ಲಕ್ಷ ರೂ. ಜಮಾ ಮಾಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net