

ಕೊಳ್ಳೇಗಾಲ: ದೇಶದ ಯೋಧರಿಗೆ ಹಾಗೂ ಭಾರತೀಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ದೇಶ ರಕ್ಷಣೆ ಮತ್ತು ಧರ್ಮ ರಕ್ಷಣೆಗಾಗಿ ಚೈತನ್ಯವನ್ನು ನೀಡಲೆಂದು ತಾಲೂಕಿನ ಚಿಕ್ಕಲೂರು ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಬಿಜೆಪಿ ಹನೂರು ಮಂಡಲ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಹನೂರು ಮಂಡಲ ಅಧ್ಯಕ್ಷರಾದ ಕೆ.ಪಿ.ವೃಷಭೇಂದ್ರ ಸ್ವಾಮಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಭಾರತೀಯರನ್ನು ಹತ್ಯೆಗೈದು ಕ್ರೌರ್ಯ ಮೆರೆದ ಪಾಕಿಸ್ತಾನಿ ಭಯೋತ್ಪಾದಕರ ಕೃತ್ಯಕ್ಕೆ ಪ್ರತಿಕಾರವಾಗಿ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶದ ಯೋಧರು ಉತ್ತರ ನೀಡಿದ್ದಾರೆ.
ದೇಶದ ಯೋಧರಿಗೆ ಹಾಗೂ ಭಾರತೀಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ದೇಶ ರಕ್ಷಣೆ ಮತ್ತು ಧರ್ಮ ರಕ್ಷಣೆಗಾಗಿ ಚೈತನ್ಯವನ್ನು ನೀಡಲೆಂದು ಧರ್ಮ ದೇವತೆಗಳು ಬೆಂಗಾವಲಾಗಿ ನಿಲ್ಲಲಿ. ಪರಿಸ್ಥಿತಿಯನ್ನು ನಿಭಾಯಿಸುವ ಪ್ರಧಾನಿ ಮೋದಿಗೆ ಶಕ್ತಿ ನೀಡಲೆಂದು ಚಿಕ್ಕಲ್ಲೂರು ಸಿದ್ದಪ್ಪಾಜಿ ಅವರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹನೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವರಪ್ರಸಾದ್, ವಿಜಯ್ ಗೌಡ, ಎಸ್ಸಿ ಮೋರ್ಚಾ ಅಧ್ಯಕ್ಷ ರವಿ, ಲೋಕೇಶ್ ಜೆಟ್ಟಿ, ಪ್ರಸನ್ನ, ಹರ್ಷ, ದೇವರಾಜ್, ಬಿಳಿಗಿರಿ, ನೂತನ್, ಮುತ್ತುರಾಜ್, ಮುತ್ತಣ್ಣ ಮತ್ತಿತರಿದ್ದರು.