ಆನ್‌ಲೈನ್ ಜಾಬ್ ನೆಪದಲ್ಲಿ ರು.೪.೩೫ ಲಕ್ಷ ವಂಚನೆ

cybe crime
Published on

ಕಲಬುರಗಿ: ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ೪.೩೫ ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ನಗರದ ಅಕ್ಕಮಹಾದೇವಿ ಕಾಲನಿಯ ಶಿಲ್ಪಾ ಬಂಗಾರಶೆಟ್ಟಿ ಸುಮಾರು ೪.೩೫ ಲಕ್ಷ ರೂ. ಮೋಸ ಹೋದವರು.
ಏ.೩೦ರಂದು ಶಿಲ್ಪಾ ಅವರನ್ನು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿದ ವಂಚಕರು, ಪಾರ್ಟ್ ಟೈಮ್ ಕೆಲಸ ಮಾಡಿ ನಿತ್ಯ ೬೦೦-೭೦೦ ರೂ. ಗಳಿಸಬಹುದು ಎಂದು ಆಮಿಷ ಒಡ್ಡಿದ್ದಾರೆ. ವಿವಿಧ ವೆಬ್‌ಸೈಟ್, ಹೋಟೆಲ್, ರೆಸ್ಟೋರೆಂಟ್‌ಗಳ ಬಗ್ಗೆ ಕಮೆಂಟ್ ಬರೆದು ಅದರ ಸ್ಕಿöçÃನ್ ಶಾಟ್ ತೆಗೆದು ವಂಚಕರ ಟೆಲಿಗ್ರಾಂ ಖಾತೆಗೆ ಶಿಲ್ಪಾ ಕಳುಹಿಸಿದ್ದಾರೆ.
ಮೇ ೧ರಂದು ಶಿಲ್ಪಾ ಖಾತೆಗೆ ೬೦೦, ೨ರಂದು ೬೫೦ ರೂ. ಜಮೆ ಮಾಡಿz್ದÁರೆ. ನಂತರ ಮುಂದಿನ ಲೆವೆಲ್ ಲಿಸ್ಟ್ ಕಳುಹಿಸಿದ ವಂಚಕರು ಹೇಳಿದ ಯುಪಿಐ ಐಡಿಗೆ ೨೦೦೦ ರೂ. ಕಳುಹಿಸಿದ್ದಾರೆ. ಮರಳಿ ೨೮೦೦ ರೂ. ಬಂದಿದೆ. ನಂತರ ಮುಂದಿನ ಟಾಸ್ಕ್ ಎಂದು ೫೦೦೦ ರೂ. ಪಡೆದಿದ್ದಾರೆ. ಪುನಃ ಹೀಗೆ ಮುಂದಿನ ಲೇವಲ್ ಅಂತ ೪೦ ಸಾವಿರ, ೯೦ ಸಾವಿರ, ನಂತರ ೩ ಲಕ್ಷ ರೂ.ಗಳನ್ನು ವಂಚಕರು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ನಂತರ ಅವರನ್ನು ಸಂಪರ್ಕಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಹಣ ಜಮೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಮೋಸ ಮಾಡಿದ ಸಾಕ್ಷಿ ಮತ್ತು ಮೀರಾ ಎಂಬುವರ ವಿರುದ್ಧ ಶಿಲ್ಪಾ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net