ಆಧ್ಯಾತ್ಮಿಕ ಕಾರ್ಯದಿಂದ ನೆಮ್ಮದಿ

bkt-3-6
ಶಂಕರ ಜಯಂತಿ ಅಂಗವಾಗಿ ಬಾಗಲಕೋಟೆ ಶ್ರೀಮಠದ ಪ್ರಧಾನ ಅರ್ಚಕ ಪಂ.ವೆ0ಕಟೇಶಭಟ್ಟ ಜೋಶಿ ನೇತೃತ್ವದಲ್ಲಿ ಶನಿವಾರ ಗಣಹೋಮ ನಡೆಯಿತು.
Published on

ಬಾಗಲಕೋಟೆ: ಪ್ರಾಪಂಚಿಕ ಜಂಜಾಟದಿAದ ಮುಳಗಿ ಹೋಗಿರುವ ನಮಗೆ ಆಧ್ಯಾತ್ಮಿಕ ಕಾರ್ಯದಿಂದ ನೆಮ್ಮದಿ ಸಿಗುತ್ತದೆ. ಆಧುನಿಕ ಒತ್ತಡದದಿಂದ ಬದುಕು ಭಾರವಾಗಿದ್ದು, ಆಧ್ಯಾತ್ಮದಿಂದ ಮಾತ್ರ ಸರಳ ಜೀವನ ನಡೆಸಲು ಸಾಧ್ಯವಿದೆ ಎಂದು ನಿವೃತ್ತ ಪ್ರಾಧ್ಯಾಪಕ ಜಿ.ಎನ್.ಕುಲಕರ್ಣಿ ಹೇಳಿದರು.

ನಗರದ ವಿನಾಯಕ ನಗರದ ಶೃಂಗೇರಿ ಶಂಕರಮಠದಲ್ಲಿ ಶನಿವಾರ ಎರಡನೇ ದಿನ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಗಲಕೋಟೆ ನಗರದಲ್ಲಿ ಶಂಕರ ಮಠ ನಿರ್ಮಾಣ ಮಾಡಬೇಕು ಎನ್ನುವ ಕನಸು ಬಹಳ ವರ್ಷಗಳಿಂದ ಮನೆ ಮಾಡಿತ್ತು, ಇಲ್ಲಿನ ಹಿರಿಯರು ೧೯೯೦ ದಶಕದಲ್ಲಿ ಶಂಕರ ಸ್ವಾಧ್ಯಾಯ ಮಂಡಳಿ ಸ್ಥಾಪಿಸಿ ಕಾರ್ಯಾ ಚಟುವಟಿಗೆ ಪ್ರಾರಂಭಿಸಲಾಯಿತು. ಮಠ ನಿರ್ಮಾಣ ಕನಸು ಸಾಕಾರಗೊಂಡಿದ್ದು ೨೦೨೫ ರಲ್ಲಿ. ಹಿರಿಯರ ತ್ಯಾಗ, ಯುವಕರ ಪರಿಶ್ರಮದ ಪರಿಣಾಮ ಭವ್ಯವಾದ ಶಂಕರ ಮಠ ನಿರ್ಮಾಣಗೊಂಡಿದೆ. ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಇದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ ಎಂದರು.

ಜಯಂತಿ ಅಂಗವಾಗಿ ಬೆಳಗ್ಗೆ ಶ್ರೀ ಚಂದ್ರಮೌಳೇಶ್ವರ ಹಾಗೂ ಶಂಕರಾಚಾರ್ಯರ ಮೂರ್ತಿಗಳಿಗೆ ರುದ್ರಾಭಿಷೇಕ, ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿ ಪಾರಾಯಣ ನಡೆಯಿತು. ವೇದ, ಘೋಷಗಳು ಮೊಳಗಿದವು. ಶ್ರೀಮಠದ ಪ್ರಧಾನ ಅರ್ಚಕ ಪಂ.ವೆAಕಟೇಶಭಟ್ಟ ಜೋಶಿ ನೇತೃತ್ವದಲ್ಲಿ ಗಣಹೋಮದಲ್ಲಿ ನೂರಾರು ಜನ ಭಕ್ತರು ಭಾಗವಹಿಸಿ ಪುನೀತರಾದರು. ಸಹಸ್ರ ಚಂದ್ರ ದರ್ಶನ ಅಂಗವಾಗಿ ಜಿ.ಎನ್.ಕುಲಕರ್ಣಿ ಹಾಗೂ ಟಿ.ಎಚ್.ಕುಲಕರ್ಣಿ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಮಹಾಲಕ್ಷಿ÷್ಮÃ ಆಕಾಶ ಕುಲಕರ್ಣಿ ತಂಡದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.

ಶಂಕರ ಮಠದ ಶಾಖಾ ವ್ಯವಸ್ಥಾಪಕ ಶಿವರಾಮ ಹೆಗಡೆ, ಡಾ.ಗಿರೀಶ ಮಾಸೂಕರ, ಡಾ.ಆರ್.ವಿ.ಜೋಶಿ, ಸಂಜೀವ ಪಾಟೀಲ, ಮಹಾದೇವಿ ಹೆಗಡೆ, ಶಶಿಕುಮಾರ ಕೆರೂರ, ದತ್ತ ರೊಟ್ಟಿ, ವೀಣಾ ಕವಟೇಕರ, ಪೂರ್ಣಿಮಾ ಪುರಾಣಿಕ, ಗಿರೀಜಾ ದೀಕ್ಷಿತ, ಸಂದ್ಯಾ ಗ್ರಾಮಪುರೋಹಿತ, ಪೂರ್ಣಿಮಾ ಬಾಗಲಕೋಟೆ, ಮೇಘಾ ಮಠ ಇತರರು ಇದ್ದರು.

ಶ್ರೀಮಠದಲ್ಲಿ ಭಾನುವಾರ ಬೆಳಗ್ಗೆ ಪೂಜೆ, ೧೦.೩೦ ಗಂಟೆಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಕುಂಕಮಾರ್ಚನೆ, ೧ ಗಂಟೆಗೆ ಸ್ತೋತ್ರ ಪಠಣ, ಭಜನೆ, ಭಕ್ತಿ ಗೀತೆ, ಅನಘಾ ಕುರುವಿನಕೊಪ್ಪ ಅವರಿಂದ ಸಂಗೀತ ಕಾರ್ಯಕ್ರಮ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net