ಆದೇಶ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ

19-RNR-04
Published on

ರಾಣೆಬೆನ್ನೂರ: ಸಾಲ ಮನ್ನಾ ಯೋಜನೆಯ ಹಣವನ್ನು ವಾಪಸು ಕಳುಹಿಸಲು ರಾಜ್ಯ ಸರ್ಕಾರ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘದ ತಾಲೂಕು ಘಟಕದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ರವೀಂದ್ರಗೌಡ ಪಾಟೀಲ ಮಾತನಾಡಿ, 2018ರಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಘೊಷಣೆ ಮಾಡಿತ್ತು. ಆದರೆ, ಬ್ಯಾಂಕ್ ಹಾಗೂ ಕಂದಾಯ ಅಧಿಕಾರಿಗಳು ಮಾಡಿದ ತಾಂತ್ರಿಕ ದೋಷದಿಂದ ಬಹಳಷ್ಟು ರೈತರಿಗೆ ಸಾಲಮನ್ನಾ ಯೋಜನೆ ಹಣ ತಲುಪದೆ, ಉಳಿದುಕೊಂಡಿದೆ. ಆದರೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆಯ ರೈತರಿಗೆ ಹಣ ಪಾವತಿಸಲು ಅ. 19 ಕೊನೆಯ ದಿನ ಎಂದು ಘೊಷಿಸಿ, ಉಳಿದ ಹಣವನ್ನು ವಾಪಸು ಸರ್ಕಾರಕ್ಕೆ ತೆಗೆದುಕೊಳ್ಳಲು ಆದೇಶ ಹೊರಡಿಸಿದೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈ ಬಿಡಬೇಕು. ಎಲ್ಲ ರೈತರಿಗೆ ಸಾಲಮನ್ನಾ ಯೋಜನೆ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಶಿರಸ್ತೇದಾರ್ ಎಂ.ಎನ್. ಹಾದಿಮನಿ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ಡಿ. ಹಿರೇಮಠ, ಬಸವರಾಜ ಪಂಗಿ, ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಅಶೋಕ ಗಂಗನಗೌಡ್ರ, ನಾಗರಾಜ ಸೂರ್ವೆ, ಪಿ.ಎನ್. ಹೊನ್ನಕ್ಕಳವರ, ಮಲ್ಲಪ್ಪ ನಡುವಿನಮನಿ, ಬಿ.ಪಿ. ಮಾಚೇನಹಳ್ಳಿ, ಮಲಕಪ್ಪ ಲಿಂಗದಹಳ್ಳಿ, ಚಂದ್ರಣ್ಣ ದರಪಟ್ಟಿ, ಕರಬಸಪ್ಪ ನಿಂಗರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net