ಆದಿವಾಸಿಗಳ ವಿಚಾರದಲ್ಲಿ ಸರ್ಕಾರದ ತಾರತಮ್ಯ

HUN-AUG-3-4(DEED PROGRAMME)
Published on

ಹುಣಸೂರು: ಆ.9ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಆದಿವಾಸಿ ದಿನಾಚರಣೆ ವೇಳೆ ಆದಿವಾಸಿಗಳ ವಿರುದ್ಧ ಆಳುವ ಸರ್ಕಾರಗಳು ನಡೆದುಕೊಳ್ಳುತ್ತಿರುವುದರನ್ನು ಖಂಡಿಸಿ ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗುವುದೆಂದು ಆದಿವಾಸಿ ಮುಖಂಡರು ತಿಳಿಸಿದರು.

ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಭಾನುವಾರ ಆದಿವಾಸಿ ದಿನಾಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, 31ನೇ ಅಂತಾರಾಷ್ಟ್ರೀಯ ಆದಿವಾಸಿ ದಿನವನ್ನು ಆಚರಿಸಲಿದ್ದೇವೆ. ಈ ಬಾರಿಯ ಘೋಷವಾಕ್ಯ ಸ್ಥಳೀಯ ಜನರ ಸ್ವನಿರ್ಣಯದ ಹಕ್ಕು, ಆಹಾರ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕಾಗಿ ಒಂದು ಮಾರ್ಗ ಎಂಬುದಾಗಿದೆ. ಆದಿವಾಸಿಗಳ ವಿಷಯದಲ್ಲಿ ಇದ್ಯಾವುದೂ ಆಗುತ್ತಿಲ್ಲ. ರಾಷ್ಟ್ರೀಯ ಯೋಜನೆಗೆ ತಮ್ಮ ಜಾಗ ಹೋದರೆ ಅವರಿಗೆ ಪರಿಹಾರ, ಬದಲಿ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ. ಆದರೆ ಆದಿವಾಸಿ ವಿಚಾರದಲ್ಲಿ ಸರ್ಕಾರದ ದೋರಣೆ ಅಪರಾಧಿ ಸ್ಥಾನದಲ್ಲಿ ನಿಲ್ಲುವುದು. ವನ್ಯಜೀವಿ ಹೆಸರಲ್ಲಿ ಕಾಡಿಂದ ಹೊರಹಾಕಿ 5ದಶಕ ಮುಗಿದಿದೆ. ಪರಿಹಾರಕ್ಕೆ ಹೈ ಕೋರ್ಟ್ ಮೆಟ್ಟಿಲೇರಿ ಆದೇಶ ಬಂದಿದೆ. ಅದನ್ನೂ ಸರ್ಕಾರ ನಿರ್ಲಕ್ಷಸಿ ಕರ್ತವ್ಯ ಲೋಪವಾಗಿದೆ ಎಂದು ಬೇಸರಿಸಿದರು.

ಸಭೆಯಲ್ಲಿ ಆದಿವಾಸಿ ಸಂಘಟನೆ ವಿಠಲ್, ಲಕ್ಷ್ಮೀ, ಶೀಲಾ, ಜಯಪ್ಪ, ಶಿವಣ್ಣ, ಮಾಸ್ತಮ್ಮ, ಪಾರ್ವತಿ, ಡಾ.ಎಸ್.ಶ್ರೀಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net