

ನಾಪೋಕ್ಲು: ಇಲ್ಲಿಗೆ ಸಮೀಪದ ಪಾರಾಣೆ ಗ್ರಾಮದಲ್ಲಿ ಪಾರಾಣೆ ಯೂತ್ ಕ್ರಿಕೆಟರ್ಸ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆದರ್ಶ್ ಫ್ರೆಂಡ್ಸ್ ಚೆಡವು ತಂಡ ಚಾಂಪಿಯನ್, ಕಗ್ಗೋಡು ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಕ್ರಿಕೆಟ್ ಪಂದ್ಯದಲ್ಲಿ ಗೋಣಿಕೊಪ್ಪ ತಂಡ ಪ್ರಥಮ ಸ್ಥಾನ ಪಡೆದರೆ, ಓಂಸಿಸಿ ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು.