ಆತ್ಮಹತ್ಯೆ ತಡೆಗೆ ಜಾಗೃತಿ ಅಗತ್ಯ

bkt-10-11 (1)
ಬಾಗಲಕೋಟೆ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ದಿನಾಚರಣೆ ಕಾರ್ಯಕ್ರಮ ಡಾ.ಎಸ್.ಸಿ.ಪಾಟೀಲ ಉದ್ಘಾಟಿಸಿದರು. ಮನೋವೈದ್ಯೆ ಡಾ.ಸೌಮ್ಯ ಪಾಟೀಲ, ಜಿಲ್ಲಾ ಕಾರಾಗೃಹದ ಅಽÃಕ್ಷಕ ಶರಣಬಸಪ್ಪ, ಜಿಲ್ಲಾ ಕಾರಾಗೃಹದ ಜೈಲರ್ ಎಂ.ಡಿ.ಸೌದಗರ, ಗೀತಾ ಮಾಲಗಾರ, ಶೂಶ್ರೂಸಕ ಅಽಕಾರಿ ಎ.ಎಂ.ಬದ್ರಣ್ಣವರ, ಮುಖ್ಯ ವೀಕ್ಷಕ ಆರ್.ಎಸ್.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಯುವಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಕುಷ್ಟರೋಗ ನಿಯಂತ್ರಣಾಽಕಾರಿ ಡಾ.ಎಸ್.ಸಿ.ಪಾಟೀಲ ಹೇಳಿದರು.

ನವನಗರದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಽಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾರಾಗೃಹ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದÀ ವಿಶ್ವ ಆತ್ಮಹತ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಭರವಸೆ ತುಂಬುವ ಕೆಲಸವಾಗಬೇಕು. ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ ೧೦ ರಂದು ಆಚರಿಸುತ್ತಾ ಬರಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಉದ್ದೇಶವಾಗಿದೆ ಎಂದರು.
ಜಗತ್ತಿನಲ್ಲಿ ಪ್ರತಿ ೪೦ ಸೆಕೆಂಡ್‌ಗೆ ಒಬ್ಬರಂತೆ ಹಾಗೂ ವರ್ಷಕ್ಕೆ ೮ ಲಕ್ಷ ಜನ ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತಿವೆ. ಇದಕ್ಕೆ ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಹತಾಶೆ, ಹಣಕಾಸಿನ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣಗಳಾಗಿವೆ. ಕೆಲವು ತಮಗೆ ಅತಿಯಾದ ಕಷ್ಟಗಳು ಬಂದಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಅಂತವರಿಗೆ ಸಮಾಲೋಚನೆ ಹಾಗೂ ಚಿಕಿತ್ಸೆ ಅವಶ್ಯವಾಗಿದೆ ಎಂದರು.

ಮನೋವೈದ್ಯೆ ಡಾ.ಸೌಮ್ಯ ಪಾಟೀಲ ಮಾತನಾಡಿ, ಅಲ್ಪ ಖುಷಿ ಪಡದುಕೊಳ್ಳಲು ಕೈಗೊಂಡ ಚಟಗಳಿಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆತ್ಮಹತ್ಯೆ ಪ್ರಕರಣಗಳು ಸಾಮಾಜಿಕ, ಆರ್ಥಿಕ, ಕುಟುಂಬ ಮತ್ತು ವೈಯಕ್ತಿಕ ಅವಽಗಳಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತಿದ್ದು, ಇದರಿಂದ ಹೊರಬರಲು ಪ್ರಯತ್ನಿಸಬೇಕು ಅಂದಾಗ ಮಾತ್ರ ಇದರಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಷಯ ಪರಿವೀಕ್ಷಕ ವೈ.ಬಿ.ಸಾಲಿ ಮಾತನಾಡಿ, ಇಂದಿನ ಯುವ ಜನತೆ ಅನೇಕ ವ್ಯಸನಿಗಳಿಗೆ ಬಲಿ ಆಗುತ್ತಿದ್ದಾರೆ. ಮೊಬೈಲ್ ಅತೀಯಾದ ಬಳಕೆ ಕೂಡಾ ಒಂದು ವ್ಯಸವಾಗಿ ಪರಿಣಮಿಸುತ್ತಿದೆ. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯುವ ಕಾರ್ಯವಾಗಬೇಕಿದೆ ಎಂದರು.

ಜಿಲ್ಲಾ ಕಾರಾಗೃಹದ ಅಽÃಕ್ಷಕ ಶರಣಬಸಪ್ಪ ಮಾತನಾಡಿ, ವ್ಯಸನಿಗಳು ಸ್ವಯಂ ಪ್ರೇರಣೆಯಿಂದ ಬಿಟ್ಟು, ಪರಿವರ್ತನೆ ಆಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬೆಲೆ ಸಿಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಜೈಲರ್ ಎಂ.ಡಿ.ಸೌದಗರ, ಗೀತಾ ಮಾಲಗಾರ, ಶೂಶ್ರೂಸಕ ಅಽಕಾರಿ ಎ.ಎಂ.ಬದ್ರಣ್ಣವರ, ಮುಖ್ಯ ವೀಕ್ಷಕ ಆರ್.ಎಸ್.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂತೋಷ ಐಹೊಳೆ ವಂದಿಸಿದರು. ನಾಗರಾಜ ತಾಳಿಕೋಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net