ಆತ್ಮ ಸಂಧಾನಕ್ಕೆ ಷಟ್​ಸ್ಥಲ ಸಿದ್ಧಾಂತ ಸಹಾಯಕ

1-hvr-01
Published on

ಹಾವೇರಿ: ಷಟ್​ಸ್ಥಲ ಸಿದ್ಧಾಂತವು ಮಾನವನ ಬದುಕಿಗೆ ಅರಿವನ್ನು ನೀಡಿ ಆತ್ಮ ಸಂಧಾನಕ್ಕೆ ಸಹಾಯಕವಾಗುತ್ತದೆ ಎಂದು ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಬುಧವಾರದಿಂದ ಆರಂಭಗೊಂಡ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಲಿಂ. ಶಿವಬಸವ ಸ್ವಾಮಿಗಳ 74ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವದಲ್ಲಿ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಧರ್ವತೀತನಾದವನಿಗೆ ಅಷ್ಟಾವರಣಗಳು, ಪಂಚಾಚಾರಗಳು, ಸದಾಚಾರಗಳು ನೈತಿಕ ಮೌಲ್ಯಗಳಾಗಿವೆ. ಅವುಗಳನ್ನು ಆಚರಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದರೆ ಆತ್ಮ ಸಾಕ್ಷಾತ್ಕಾರ ಮತ್ತು ಸಮಾಜೋದ್ಧಾರ ಅನುಸಂಧಾನಕ್ಕೆ ಭದ್ರ ಬುನಾದಿಗಳಾಗುತ್ತವೆ. ಕಾಯಕ ಸಿದ್ಧಾಂತವು ಷಟ್​ಸ್ಥಲದ ಮುಖ್ಯ ಉದ್ದೇಶವಾಗಿದ್ದು, ಕಾಯಕವು ಸಮಾಜದ ಚಲನಶೀಲತೆಗೆ ಕಾರಣವಾಗಿದೆ. ಮಹಾಪುರುಷರ ಜೀವನ ಸಂದೇಶವು ಇವುಗಳನ್ನೇ ಒಳಗೊಂಡು ಆದರ್ಶವಾಗಿರುತ್ತದೆ ಎಂದರು.

ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಬಸಪ್ಪ ಜಾಬಿನ, ಶಿವಲಿಂಗಪ್ಪ ಗುಂಜೆಟ್ಟಿ, ತಮ್ಮಣ್ಣ ಮುದ್ದಿ, ಪಿ.ಡಿ. ಶಿರೂರ, ಎಸ್.ಎಸ್. ಮುಷ್ಠಿ, ವೀರಣ್ಣ ಅಂಗಡಿ, ಸಿ.ಜಿ. ತೋಟಣ್ಣನವರ, ರಾಚಪ್ಪ ಲಂಬಿ, ಕುಮಾರ ಮುದಗಲ್ಲ, ಡಾ. ಎಸ್.ಆರ್. ಗೊಡ್ಡೆಮ್ಮಿ, ಮಹೇಶ ಚಿನ್ನಿಕಟ್ಟಿ, ವಿ.ಜಿ. ಬಣಕಾರ, ಆರ್.ಎಸ್. ಮಾಗನೂರು, ಶಿವಲಿಂಗೇಶ್ವರ ವಿದ್ಯಾಪೀಠದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೇಣುಕಾ ಮಡಿವಾಳರ ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಸ್ವಾಗತಿಸಿದರು. ಬಿ.ಎಂ. ಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net