

ಮುಂಡಗೋಡ: ತಾಲೂಕಿನ ಹುನಗುಂದ ಅರಣ್ಯ ಪ್ರದೇಶದಲ್ಲಿ ಮೇಯಲು ಹೋದ ಆಡನ್ನು ಹೆಬ್ಬಾವೊಂದು ನುಂಗಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಹುನಗುಂದ ಅರಣ್ಯ ಪ್ರದೇಶದ ಅತ್ತಿವೇರಿ ದರ್ಗಾ ಹತ್ತಿರ ಮೇಯಿಸಲು ಹೋದಾಗ ಹಿಂಡಿನಲ್ಲಿದ್ದ ಒಂದು ಆಡನ್ನು ಬೃಹತ್ ಆಕಾರದ ಹೆಬ್ಬಾವು ಹಿಡಿದು ಅರ್ಧ ಭಾಗ ನುಂಗಿದೆ. ಈ ವೇಳೆ ಅಲ್ಲಿಗೆ ಬಂದ ಜನರ ಗದ್ದಲ ಕೇಳಿ ಆಡನ್ನು ಬಿಟ್ಟು ಹೋಗಿದೆ. ಹೆಬ್ಬಾವಿನ ಹಿಡಿತಕ್ಕೆ ಸಿಕ್ಕ ಆಡು ಮೃತಪಟ್ಟಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.