ಆಡಂಬರದ ಜೀವನಕ್ಕೆ ಪ್ರಕೃತಿ ಬಲಿ

bkt-23-1 a (1)
ಬಾಗಲಕೋಟೆ ನಗರದ ತೋವಿವಿಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ೧೩ನೇ ಅಂತರ ಮಹಾವಿದ್ಯಾಲಗಳ ಯುವಜನೋತ್ಸವ ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ ಉದ್ಘಾಟಿಸಿದರು. ತೋವಿವಿಯ ಡೀನ್ ಡಾ.ರಾಮಚಂದ್ರ ನಾಯಕ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯೆ ಬಿ.ಸುಮಿತ್ರಾದೇವಿ, ಕುಲಪತಿ ಡಾ.ಕೆ.ಎಂ.ಇಂದಿರೇಶ, ಪ್ರಾದ್ಯಾಪಕ ಡಾ.ವೆಂಕಟೇಶಲು ಸೇರಿದಂತೆ ಇತರರು ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಮನುಷ್ಯ ಆಡಂಬರದ ಜೀವನ ಇಂದಿನ ಕಂಪ್ಯೂಟರ ಯುಗಕ್ಕೆ ಮಾರು ಹೋಗಿ ಪ್ರಕೃತಿಗೆ ವಿರುದ್ಧವಾದ ಕಾರ್ಯ ಮಾಡುತ್ತಿದ್ದಾನೆ ಎಂದು ಜಾನಪದ ವಿದ್ವಾಂಸ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ ಹೇಳಿದರು.
ನಗರದ ತೋವಿವಿಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ೧೩ನೇ ಅಂತರ ಮಹಾವಿದ್ಯಾಲಗಳ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಾವು ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ. ಕಣ್ಣೆದುರಿಗೆ ಕಾಣುತ್ತಿದ್ದ ಜೀವ ಜಲವನ್ನು ೫೦೦ ಪೀಟ್ ಕೊಳವೆಬಾವಿ ಕೊರೆದು ಹುಡಕುತ್ತಿದ್ದೇವೆ. ಕೇವಲ ನಮ್ಮ ಪಾಲಿನ ನೀರು ಬಳಕೆ ಮಾಡುತ್ತಿಲ್ಲ. ಮುಂದಿನ ಪೀಳಿಗೆ ಜನರ ನೀರನ್ನು ಕಸಿದುಕೊಳ್ಳುತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಬದುಕಿನ ರೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬಾವಿ ಪ್ರಜೆಗಳಾಗುತ್ತಿರುವ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯೆ ಪಡೆಯುವದರ ಜೊತೆಗೆ ಸಮಾಜಕ್ಕೊಂದು ಸುಧಾರಣೆ ಕಾಣಿಕೆ ನೀಡಲು ಮುಂದಾಗಬೇಕು. ಕೇವಲ ವಿದ್ಯೆ ಕಲಿತರೆ ಸಾಲದು, ಜೊತೆಗೆ ಸಂಸ್ಕೃತಿಕ ಮತ್ತು ಕ್ರೀಡಾ ಮನೋಭಾವನೆ ಹೊಂದಬೇಕು ಎಂದ ಅವರು ಕ್ರೀಡೆ ಮತ್ತು ಸಂಸ್ಕೃತಿ ಶಿಕ್ಷಣದ ಅಂಗವಾಗಿದ್ದು, ಶಿಕ್ಷಣವು ಅಪೂರ್ಣಗೊಂಡಾಗ ಅಂದೇ ನಿಮ್ಮ ಕ್ರೀಡಾ ಶಕ್ತಿ ಮತ್ತು ಸಂಸ್ಕೃತ ಆಸಕ್ತಿ ಕಳೆದು ಹೋಗುತ್ತದೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ತೋವಿವಿಯ ಡೀನ್ ಡಾ.ರಾಮಚಂದ್ರ ನಾಯಕ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಬೇಕಾಗಿದ್ದು, ಅಂತಹ ವಿದ್ಯಾರ್ಥಿಗಳಲ್ಲಡಗಿದ ಪ್ರತಿಭೆಯನ್ನು ಅನಾವರಣಗೊಳಿಸಲು ತೋವಿವಿಯ ಇಂತಹ ಕಲಾ ಸಂಗಮದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಒಳಗೆ ಹುದುಗಿದ್ದ ಕ್ರೀಡೆ, ಕಲೆ, ಸಂಸ್ಕೃತಿಯ ಪ್ರತಿಭೆಯನ್ನು ಅನಾವರಣಗೊಳಿಸಬಹುದಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪಽðಸುವುದು ಮುಖ್ಯವಾಗಿದೆ ಎಂಬುದು ಅರಿಯಬೇಕು ಎಂದು ತಿಳಿಸಿದರು.
ಪ್ರಾರಂಭದಲ್ಲಿ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ ಪರಿಸರ ಪ್ರೇಮದ ಗೀತೆಯನ್ನು ಹಾಡಿಸುತ್ತಾ ಮಕ್ಕಳನ್ನು ಮನರಂಜಿಸಿದರು. ಕಾರ್ಯಕ್ರಮದಲ್ಲಿ ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯೆ ಬಿ.ಸುಮಿತ್ರಾದೇವಿ, ಕುಲಪತಿ ಡಾ.ಕೆ.ಎಂ.ಇಂದಿರೇಶ, ಪ್ರಾದ್ಯಾಪಕ ಡಾ.ವೆಂಕಟೇಶಲು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net