ಆಟೋ ನಿಲ್ದಾಣ ಸ್ಥಳಾಂತರ ಬೇಡ

Oplus_131072
Oplus_131072
Published on

ವಿರಾಜಪೇಟೆ: ವಿರಾಜಪೇಟೆಯ ಮಾಂಸದ ಮಾರುಕಟ್ಟೆ ಬಳಿ ಇರುವ ಆಟೋ ನಿಲ್ದಾಣವನ್ನು ಸ್ಥಳಾಂತರ ಮಾಡದಂತೆ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮಂಗಳವಾರ ಆಟೋ ನಿಲ್ದಾಣವನ್ನು ಅಧಿಕಾರಿಗಳು ಬೇರಡೆಗೆ ಸ್ಥಳಾಂತರ ಮಾಡುವಂತೆ ಸೂಚಿಸಿದರು. ಈ ವಿಚಾರವನ್ನು ಆಟೋ ಸಂಘದ ಸದಸ್ಯರು ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರು ಆಟೋ ಚಾಲಕರ ಅಹವಾಲು ಆಲಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಂಡು ಅಲ್ಲಿಯೇ ಆಟೋ ನಿಲ್ದಾಣ ಮುಂದುವರಿಸುವಂತೆ ಸೂಚನೆ ನೀಡಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯ ಮೊಹಮ್ಮದ್ ರಫಿ, ರಾಜೇಶ್, ಮತೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net