ಆಗದ ಕಾಲುವೆ ನಿರ್ಮಾಣ

10KWR4
Published on

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಗೆ ಹಳ್ಳಕ್ಕೆ ಬಾಂದಾರ ನಿರ್ವಿುಸಿ ಐದು ವರ್ಷ ಕಳೆದರೂ ಕಾಲುವೆ ನಿರ್ಮಾಣ ಮಾಡದ ಕಾರಣ ಕೃಷಿಕರಿಗೆ ಅದು ಪ್ರಯೋಜನಕ್ಕೆ ಬಾರದಂತಾಗಿದೆ.

ಗ್ರಾಮದ ನೂರಾರು ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ಪಕ್ಕದಲ್ಲೇ ಬಣಗೆ ಹಳ್ಳ ಹರಿದಿದೆ. ಅದಕ್ಕೆ ಬಾಂದಾರ ನಿರ್ವಿುಸಿ ಕೆಲವೆಡೆ ಹೆಸರಿಗೆ ಮಾತ್ರ ಕಲ್ಲಿನ ಪಿಚ್ಚಿಂಗ್ ಮಾಡಲಾಗಿತ್ತು. ಅದು ಈಗ ಕೊಚ್ಚಿ ಹೋಗಿದ್ದು, ಹಳ್ಳದ ನೀರು ಗದ್ದೆಗಳಿಗೆ ಬರುತ್ತಿಲ್ಲ. ಇದರಿಂದ ಪಕ್ಕದಲ್ಲೇ ನೀರು ಹರಿದರೂ ಕಾಲುವೆ ಇಲ್ಲದ ಕಾರಣ ರೈತರು ಕೃಷಿಗೆ ಪಂಪ್​ಸೆಟ್ ಅಥವಾ, ಬಾವಿಯಿಂದ ನೀರು ಪಡೆಯಬೇಕಾದ ಅನಿವಾರ್ಯತೆ ಇದೆ.

ಈ ಬಾರಿ ಅತಿ ಹೆಚ್ಚು ಜನ ಭತ್ತ ಬೆಳೆದಿದ್ದು, ಈಗ ಭತ್ತ ನೀರಿಲ್ಲದೆ ಒಣಗುವ ಪರಿಸ್ಥಿತಿ ಬಂದಿದೆ. ಬಾಂದಾರಿನ ನೀರು ಹರಿಯಲು ಕಾಲುವೆ ಮಾಡಿಕೊಟ್ಟಲ್ಲಿ ನೂರಾರು ಎಕರೆ ಭೂಮಿಗೆ ನೀರಿನ ವ್ಯವಸ್ಥೆಯಾಗಲಿದೆ ಎಂಬುದು ಗ್ರಾಮದ ಜೈವಂತ ಗೌಡ, ಗೋವಿಂದ ಗೌಡ, ಥಾಕು ಗೌಡ, ಚಂದ್ರಕಾಂತ ಗೌಡ ಆಗ್ರಹಿಸಿದ್ದಾರೆ.

ಜಲಾನಯನದಲ್ಲಿ ಬಾಂದಾರ ಮಾತ್ರ ನಿರ್ವಣಕ್ಕೆ ಅವಕಾಶವಿದೆ. ಇದರಿಂದ ಹಿಂದೆ ಕಾಲುವೆ ನಿರ್ವಿುಸಿರಲಿಕ್ಕಿಲ್ಲ. ಏನೇ ಇರಲಿ ಸ್ಥಳೀಯರು ಈಗ ಗ್ರಾಪಂ ಹಾಗೂ ನಮ್ಮ ಇಲಾಖೆಯ ಅರ್ಜಿ ಸಲ್ಲಿಸಿದಲ್ಲಿ ನಾವು ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಮಾಡಿ ಕೊಡಲಿದ್ದೇವೆ. | ಜಿ.ಎನ್. ಗುಡಿಗಾರ ಕೃಷಿ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net