ಆಕಾಶ ದೀಪ ಬಸವಣ್ಣ

bkt-11-1
Published on

ಬಾಗಲಕೋಟೆ: ಕಾರ್ತಿಕದ ಕತ್ತಲ್ಲಿ ಆಕಾಶದೀಪವಾಗಿ ಬಂದವ ಬಸವಣ್ಣ, ಬಿದ್ದವರನ್ನು ಎತ್ತಲು ಬಂದ ಬಸವಣ್ಣ, ಕಾರ್ಲಮಾರ್ಕ್ಸ ಶ್ರಮ ಗೌರವವನ್ನು ತಂದುಕೊಟ್ಟರೆ, ಬಸವಣ್ಣ ಶ್ರಮಿಕರಿಗೆ ದೈವತ್ವ ತೋರಿಸಿದ ಎಂದು ಸಾಹಿತಿ, ಚಿಂತಕ ಅಶೋಕ ಹಂಚಲಿ ಹೇಳಿದರು.

ನಗರದ ವಿದ್ಯಾಗಿರಿ ಬಡಾವಣೆಯಲ್ಲಿನ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದಲ್ಲಿ ಶುಕ್ರವಾರ ಸಮಾನ ಮನಸ್ಕ ಹಿರಿಯ ನಾಗರಿಕ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾಗೂ ವರದಾನೇಶ್ವರಿ ಮಹಿಳಾ ಮಂಡಳ ಹಮ್ಮಿಕೊಂಡಿದ್ದ ಮಾಸಿಕ ಶರಣ ಚಿಂತನ ಗೋಷ್ಠಿ ಹಾಗೂ ಬಸವ ಜಯಂತ್ಯತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ ಅಸಂಗ್ರಹ ನೀತಿ, ಪ್ರಾಮಾಣಿಕತೆ, ಸಮತಾವಾದ, ಆತ್ಮಕಲ್ಯಾಣದ ಮೂಲಕ ಲೋಕಕಲ್ಯಾಣ ಚಿಂತನೆ, ಬಸವಣ್ಣನ ಕಿಂಕರ ಭಾವ,ಆತ್ಮಶೋಧನೆ, ನಡೆ-ನುಡಿ ಒಂದಾಗಿಸಿಕೊಂಡು ಬದುಕಿ ಮಾದರಿಯಾದ ಬಗೆ ಇವೆಲ್ಲ ನಮ್ಮ ಸಾಮಾಜಿಕ ಬದುಕಿಗೆ ಮಾರ್ಗದರ್ಶಿಯಾದಲ್ಲಿ ಸುಂದರ ಸಮಾಜ ಜೀವನ ನಿರ್ಮಾಣವಾಗಬಲ್ಲುದು ಎಂದರು.

ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಬಸವತತ್ವಗಳ ಪಾಲನೆಯಾಗಬೇಕಿದೆ, ಮನಸ್ಸು ಮಾಡಿದಲ್ಲಿ ಅಸಾಧ್ಯವಾಗದು, ಅಂಥ ಪ್ರಯತ್ನಗಳೇ ಇಂಥ ಸಮಾರಂಭಗಳ ಆಚರಣೆಗಳ ಉದ್ದೇಶ ಎಂದರು.

ಕದಳಿ ವೇದಿಕೆಯ ಜಿಲ್ಲಾ ಕೋಶಾಧ್ಯಕ್ಷೆ ಉಮಾ ರೇವಡಿಗಾರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ, ಸಮಾನ ಮನಸ್ಕ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಾ.ಸಿ.ಎಸ್.ಪಾಟೀಲ, ವರದಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ ಉಪಸ್ಥಿತರಿದ್ದರು. ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಪ್ರೊ.ಶಿವಶಂಕರ ಮುತ್ತಗಿ ಪರಿಚಯಿಸಿದರು. ಎಸ್.ವಿ.ಚೌಡಪುರ ಶರಣು ಸಮರ್ಪಿಸಿದರು. ಬಸವರಾಜ ತಿಪಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net