ಆಕರ್ಷಿಸಿದ ಬೆಂಕಿ ರಹಿತ ಅಡುಗೆ ಸ್ಪರ್ಧೆ

bkt-6-5 (1)
ಬಾಗಲಕೋಟೆ ನಗರದ ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ತಯಾರಿಸಲಾದ ಖಾದ್ಯಗಳು.
Published on

ಬಾಗಲಕೋಟೆ: ಖರ್ಜೂರ ಬರ್ಪಿ ಲಾಡು, ಜ್ಯೂಸ್, ಸೌತೆಕಾಯಿ, ಗಜ್ಜರಿ ಹಲ್ವಾ, ಬರ್ಪಿ, ಪಾನ್ ಲಡ್ಡು, ಕೇಸರ ಪಿಸ್ತಾ, ಲಸ್ಸಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳು ಬಾಯಲ್ಲಿ ನೀರಾಡಿಸುವಂತೆ ಮಾಡಿದವು. ಬೆಂಕಿ ರಹಿತವಾಗಿ ಸಿದ್ದಪಡಿಸಿದ ಅಡುಗೆ ಎನ್ನುವುದೇ ಈ ಖಾದ್ಯಗಳ ವಿಶೇಷ…!

ನಗರದ ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸೋಮವಾರ ೮ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಎಲ್ಲರನ್ನು ಆಕರ್ಷಿಸಿತು. ೫೦ ಕ್ಕೂ ಹೆಚ್ಚು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.

ಖರ್ಜುರಾದಿ ಮಂಥ, ಶೆಂಗಾ ಲಾಡು, ಸೌತೆಕಾಯಿ, ಗಜ್ಜರಿ ಹಲ್ವಾ, ದಾಳಿಂಬೆ ಜ್ಯೂಸ್, ಕೋಕೋನೆಡ್ ಬರ್ಪಿ, ರಸಮಲಾಯಿ, ಬೀಟ್‌ರೂಟ್ ಹಲ್ವಾ, ಬ್ರೇನ್ ಬೂಸ್ಟರ್, ರೆಲೀಶ್ ಬೂಸ್ಟರ, ಮುದ್ಗ ಲವಣ ರಾಕ್, ಚಿಂಚಾ ಪಾನಕ, ಎನರ್ಜಿ ಬಾಲ್ಸ್, ಖರ್ಜುರದ ಮಂಥ, ಅಲೋವೆರಾ ಸಜ್ಜಾ ಜ್ಯೂಸ್, ಪುದಿನಾ ಜ್ಯೂಸ್, ರಾಗಿ ಬನಾನಾ ಸೋಪ್, ಕ್ಯಾರೇಟ್ ಲಡ್ಡು, ಪುದಿನಾ ಮಜ್ಜಿಗೆ ಸೇರಿದಂತೆ ವಿವಿಧ ಬಗೆ ಖಾದ್ಯಗಳು ಆರೋಗ್ಯ ಜಾಗೃತಿ ಮೂಡಿಸಿದರು.

ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ಮಾತನಾಡಿ, ಆಯುರ್ವೇದ ಜಗತ್ತಿಗೆ ಭಾರತ ಕೊಟ್ಟಿರುವ ಅತ್ಯಮೂಲ್ಯ ಕೊಡುಗೆಯಾಗಿದ್ದು, ಭಾರತೀಯ ಅಹಾರ ಪರಂಪರೆಯಲ್ಲಿ ಆರೋಗ್ಯ ಅಡಗಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಹಿರಿಯರ ವಾಣಿಯಂತೆ ದೇಶದ ಜನತೆಗೆ ಉತ್ತಮ ಗುಣಮಟ್ಟದ ಅಹಾರದ ಅವಶ್ಯಕತೆ ಇದೆ ಎಂದರು.

ಸ್ಪರ್ಧೆ ಸಂಯೋಜಕರಾದ ಡಾ.ರವಿ ಹೊಸಮನಿ ಹಾಗೂ ಡಾ.ವೀಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net