

ಕುಮಟಾ: ತಾಲೂಕಿನ ಮಿರ್ಜಾನ ಪಂಚಾಯಿತಿ ವ್ಯಾಪ್ತಿಯ ಖಂಡಗಾರದ ಮಹಿಳೆಯೊಬ್ಬರು ಗುರುವಾರ ತಡರಾತ್ರಿ ಆಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಖಂಡಗಾರದ ಗರ್ಭಿಣಿಗೆ ಗುರುವಾರ ತಡರಾತ್ರಿ 1-30 ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹತ್ತಿರದಲ್ಲಿ ಖಾಸಗಿ ವಾಹನ ಲಭ್ಯತೆ ಇಲ್ಲದಿರುವುದರಿಂದ ಹಿರೇಗುತ್ತಿ ಚೆಕ್ಪೋಸ್ಟ್ ಬಳಿಯ 108 ಆಂಬುಲೆನ್ಸ್ ಕರೆ ಮಾಡಿದ್ದರು. ತಕ್ಷಣ ಬಂದ 108 ಆಂಬುಲೆನ್ಸ್ ಗರ್ಭಿಣಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೆರಿಗೆ ನೋವು ಹೆಚ್ಚಾಗಿತ್ತು.
ಆಂಬುಲೆನ್ಸ್ನಲ್ಲಿದ್ದ ಶುಶ್ರೂಷಕ ರಾಜೇಶ ಹಾಗೂ ಪೈಲಟ್ ರಮೇಶ ಅವರು ಸಮಯ ಪ್ರಜ್ಞೆಯೊಂದಿಗೆ 2 ಗಂಟೆ ಸುಮಾರಿಗೆ ಹೆರಿಗೆಯಾಗಿದೆ. ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿದ್ದು ಕುಮಟಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.